See also 2X-ray
1X-ray ಎಕ್ಸ್‍ರೇ
ನಾಮವಾಚಕ

(x-ray ಎಂದೂ ಬಳಕೆ).

  1. (ಬಹುವಚನದಲ್ಲಿ) ಕ್ಷ ಕಿರಣಗಳು; ಎಕ್ಸ್‍ ಕಿರಣಗಳು; ನೇರಳಾತೀತ ಕಿರಣಗಳಿಗಿಂತ ಕಡಮೆ ತರಂಗದೂರ ಉಳ್ಳ, ಕಾರ್ಬನ್‍, ಹೈಡ್ರೊಜನ್‍, ಆಕ್ಸಿಜನ್‍, ನೈಟ್ರೊಜನ್‍ಗಳಂಥ ಕಡಮೆ ಪರಮಾಣು ತೂಕದ ಧಾತುಗಳಿಂದಾದ, ಘನ ಪದಾರ್ಥದ ಮೂಲಕ ಹಾದುಹೋಗಬಲ್ಲ ವಿದ್ಯುತ್ಕಾಂತ ತರಂಗಗಳು.
  2. ಎಕ್ಸ್‍ರೇ ಚಿತ್ರ; ಕ್ಷ ಕಿರಣಚಿತ್ರ; ದೇಹದ ಯಾವುದೇ ಭಾಗವನ್ನು ಎಕ್ಸ್‍ ಕಿರಣಗಳಿಗೊಡ್ಡಿ ಫಿಲ್ಮ್‍ ಮೇಲೆ ಪಡೆದ, ಮೂಳೆ ಮುಂತಾದ ಅಧಿಕ ಪರಮಾಣು ತೂಕದ ಧಾತುಗಳಿಂದ ರೂಪುಗೊಂಡ ದೇಹಭಾಗಗಳನ್ನು ಎತ್ತಿ ತೋರಿಸುವ ಚಿತ್ರ.