See also 2zoom
1zoom ಸೂಮ್‍
ಅಕರ್ಮಕ ಕ್ರಿಯಾಪದ
  1. (ವಿಮಾನದ ವಿಷಯದಲ್ಲಿ) ಕಡಿದಾಗಿಯೂ ವೇಗವಾಗಿಯೂ ಏರು; ತಟಕ್ಕನೆ ಮೇಲಕ್ಕೇರು ( ಸಕರ್ಮಕ ಕ್ರಿಯಾಪದ ಸಹ).
  2. (ಮುಖ್ಯವಾಗಿ ವಿಮಾನವು) ಗುಂಯ್‍ ಎಂದು ಶಬ್ದ ಮಾಡುತ್ತ ಮೇಲಕ್ಕೆ ಹಾರು.
  3. (ಛಾಯಾಚಿತ್ರ ಗ್ರಾಹಕ ಯಾ ಯವದ ವಿಷಯದಲ್ಲಿ) (ಮುಖ್ಯವಾಗಿ ದೂರದ ದೃಶ್ಯ ಸಮೀಪದೃಶ್ಯವಾಗುವಂತೆ) ತಟ್ಟನೆ, ಸರಕ್ಕನೆ ಬದಲಾಯಿಸು; ಮುಖ್ಯವಾಗಿ ಸರಸರನೆ ಸದ್ದುಮಾಡುತ್ತಾ ಬೇಗಬೇಗನೆ ಚಲಿಸು.
See also 1zoom
2zoom ಸೂಮ್‍
ನಾಮವಾಚಕ
  1. ವಿಮಾನ (ಗುಂಯ್‍ ಎನ್ನುತ್ತಾ) ತಟಕ್ಕನೆ ಮೇಲಕ್ಕೇರುವುದು; ವಿಮಾನ ಕಡಿದಾಗಿ, ವೇಗವಾಗಿ ಏರುವುದು.
  2. (ಛಾಯಾಚಿತ್ರಣ) ಸಮೀಪೀಕರಣ ಯಾ ದೂರೀಕರಣ; ಛಾಯಾಚಿತ್ರಗ್ರಾಹಕದ ಮಸೂರದ ನಾಭಿದೂರವನ್ನು ವ್ಯತ್ಯಾಸಮಾಡಿ ದೂರದೃಶ್ಯವನ್ನು ಹತ್ತಿರದೃಶ್ಯವನ್ನಾಗಿ ಯಾ ಹತ್ತಿರದ್ದನ್ನು ದೂರದ್ದನ್ನಾಗಿ ಕಾಣುವಂತೆ ಮಾಡುವ ಚಿತ್ರೀಕರಣ.