zodiac ಸೋಡಿಆಕ್‍
ನಾಮವಾಚಕ
  1. ರಾಶಿಚಕ್ರ:
    1. ಆಕಾಶದಲ್ಲಿ ಸೂರ್ಯನ ತೋರ್ಕೆಯ ಪಥವಾದ ಕ್ರಾಂತಿವೃತ್ತದಿಂದ ಇಕ್ಕೆಲಗಳಲ್ಲೂ ಸುಮಾರು ಎಂಟು ಡಿಗ್ರಿ ಅಂತರವನ್ನೊಳಗೊಂಡ, ವರ್ಷಾದ್ಯಂತ ಗ್ರಹಗಳೆಲ್ಲವೂ ಸಂಚರಿಸುವ ಪ್ರದೇಶವಾಗಿರುವ, ಹನ್ನೆರಡು ಸಮಭಾಗಗಳಾಗಿ ಮಾಡಿ ಆ ಭಾಗಗಳಿಗೆ ಮೇಷ ವೃಷಭಾದಿ ಹೆಸರುಗಳನ್ನಿಟ್ಟು ದ್ವಾದಶ ರಾಶಿಗಳೆಂದು ಪರಿಗಣಿಸಲಾಗಿರುವ ಚಕ್ರಾಕಾರದ ಪಟ್ಟೆ.
    2. ಅದರ ಚಿತ್ರ.
  2. ಪೂ ವೃತ್ತ, ವಲಯ.
ಪದಗುಚ್ಛ

signs of the zodiac (ರಾಶಿಚಕ್ರದ ಯಾ ರಾಶಿಕುಂಡಲಿಯ) ಮೇಷಾದಿ ಹನ್ನೆರಡು ರಾಶಿಗಳು (ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನುಸ್ಸು, ಮಕರ, ಕುಂಭ, ಮೀನ). Figure: zodiac