See also 2zip  3zip
1zip ಸಿಪ್‍
ನಾಮವಾಚಕ
  1. ಬಂದೂಕಿನಿಂದ ಗುಂಡು ಹೊಡೆದಂಥ ಯಾ ಒಮ್ಮೆಲೇ ಬಟ್ಟೆ ಹರಿದಂಥ ಹಗುರ, ತೀಕ್ಷ ಶಬ್ದ.
  2. (ರೂಪಕವಾಗಿ) ಬಲ; ಶಕ್ತಿ; ಜೋರು; ಸತ್ತ ; ಕಸುವು; ಹುರುಪು.
  3. ಸಿಪ್ಪು; ಒಂದರ ಚಾಚುಗಳು ಮತ್ತೊಂದರಲ್ಲಿ ತೊಡರಿಕೊಳ್ಳುವಂಥ ಎರಡು ಮೆತುಪಟ್ಟಿಗಳ ನಡುವೆ ಹಿಂದೆಮುಂದೆ ಚಲಿಸುವ ಕ್ಲಿಪ್ಪಿನಿಂದ ಭದ್ರಪಡಿಸಬಹುದಾದ ಬಂಧನಿ ವ್ಯವಸ್ಥೆ.
See also 1zip  3zip
2zip ಸಿಪ್‍
ಕ್ರಿಯಾಪದ

(ಭೂತರೂಪ & ಭೂತಕೃದಂತ zipped; ವರ್ತಮಾನ ಕೃದಂತ zipping).

ಸಕರ್ಮಕ ಕ್ರಿಯಾಪದ
  1. ಜಿಪ್‍ ಹಾಕು; (ಜಿಪ್‍ ಬಂಧನಿಯಿಂದ) ಭದ್ರಪಡಿಸು; ಮುಚ್ಚಿ ಭದ್ರಮಾಡು.
  2. ಜಿಪ್‍ ಮಾಡು; ಜಿಪ್‍ ಮಾಡು; ‘ಫೆ ಲ್‍’ ಅನ್ನು ಕಡಮೆ ಸ್ಥಳ ತೆಗೆದುಕೊಳ್ಳುವಂತೆ ಅಡಕಮಾಡು, ಕುಗ್ಗಿಸು; ಸಂಕುಚಿಸು.
ಅಕರ್ಮಕ ಕ್ರಿಯಾಪದ
  1. ಜಿಪ್‍ ಹಾಕು; ಜಿಪ್‍ ಹಾಕಿ ಭದ್ರಮಾಡು.
  2. ಅತಿವೇಗದಿಂದ ಚಲಿಸು.
See also 1zip  2zip
3zip ಸಿಪ್‍
ಗುಣವಾಚಕ

ಜಿಪ್‍ – ಇರುವ, ಹಾಕಿದ: zip bag ಜಿಪ್‍(ಹಾಕಿದ) ಚೀಲ ಮೊದಲಾದವು.