zest ಸೆಸ್ಟ್‍
ನಾಮವಾಚಕ
  1. ರುಚಿಕಾರಕ; ರುಚಿ ಹುಟ್ಟಿಸುವ ಸವಿ ಯಾ ಗುಣ.
  2. ಪೂರ್ಣ ಆಸ್ವಾದ ಯಾ ತೀವ್ರಾಸಕ್ತಿ; ಕಟ್ಟೊಲವು.
  3. ರುಚಿ; ಆಸಕ್ತಿ; ಅಭಿನಿವೇಶ.
  4. ಹುರುಪು; ಹುಮ್ಮಸ್ಸು; ಅತ್ಯುತ್ಸಾಹ: entered into it with zest ಹುರುಪಿನಿಂದ ಅದರಲ್ಲಿ ಭಾಗವಹಿಸಿದ, ಪಾಲುಗೊಂಡ.
  5. ವ್ಯಂಜನ; ರುಚಿಗಾಗಿ ಸೇರಿಸುವ, ನಿಂಬೆ ಯಾ ಕಿತ್ತಳೆ ಹಣ್ಣಿನ ಸಿಪ್ಪೆ ಯಾ ಸಿಪ್ಪೆಯ ಚೂರು.
ಪದಗುಚ್ಛ

add zest to ರುಚಿಗೊಳಿಸು; ಆಸಕ್ತಿ, ರುಚಿ ಹುಟ್ಟಿಸು; ಉತ್ಸಾಹ ತುಂಬು.