zap ಸ್ಯಾಪ್‍
ಕ್ರಿಯಾಪದ

(ಭೂತರೂಪ & ಭೂತಕೃದಂತ zapped; ವರ್ತಮಾನ ಕೃದಂತ zapping).

ಸಕರ್ಮಕ ಕ್ರಿಯಾಪದ

(ಅಶಿಷ್ಟ)

  1. ಹೊಡೆ; ಹೊಡೆದು ಕೊಲ್ಲು.
  2. ಆಕ್ರಮಣ ನಡೆಸು; ಘಾಸಿಯುಂಟು ಮಾಡು; ನಾಶಮಾಡು.
  3. ಜೋರಾಗಿ ಹೊಡೆ: zapped the ball over the net ಬಲೆಯ ಮೇಲೆ ಜೋರಾಗಿ ಹೊಡೆದ.
  4. ಭಾವಪರವಶವಾಗಿಸು.
  5. (ಕಂಪ್ಯೂಟರ್‍) (ಪ್ರೋಗ್ರಾಂ ಒಂದರಲ್ಲಿ) ಒಂದು ಬಾಬನ್ನು ಯಾ ಐಟಂ ಅನ್ನು ಅಳಿಸಿಹಾಕು ಯಾ ಬದಲಿಸು.
  6. ವೇಗವಾಗಿ ಮತ್ತು ಜೋರಾಗಿ ಚಲಿಸುವಂತೆ ಮಾಡು.
ಅಕರ್ಮಕ ಕ್ರಿಯಾಪದ
  1. ವೇಗವಾಗಿ ಮತ್ತು ಬಿರುಸಾಗಿ – ಚಲಿಸು, ಸಾಗು.
  2. (ವಿಡಿಯೋ ಟೇಪಿನ ಒಂದು ಭಾಗವನ್ನು ಹಾರಿಸಲು, ನೋಡದೆ ಬಿಟ್ಟುಬಿಡಲು) ಬೇಗ ಸುತ್ತುವಂತೆ ಮಾಡು, ತಿರುಗಿಸು, ಸುತ್ತಿಸು.