See also 2worst  3worst  4worst
1worst ವರ್ಸ್‍
ಗುಣವಾಚಕ

ಅತ್ಯಂತ ಕೆಟ್ಟ; ದುಷ್ಟತಮ; ಪರಮ ನೀಚ; ಅತಿನಿಕೃಷ್ಟ; ಅಧಮಾಧಮ.

See also 1worst  3worst  4worst
2worst ವರ್ಸ್‍
ಕ್ರಿಯಾವಿಶೇಷಣ

ಅತ್ಯಂತ ಕೆಟ್ಟದ್ದಾಗಿ; ದುಷ್ಟತಮವಾಗಿ; ಪರಮ ನೀಚತನದಿಂದ.

See also 1worst  2worst  4worst
3worst ವರ್ಸ್‍
ನಾಮವಾಚಕ

ಅತ್ಯಂತ ಕೆಟ್ಟದಾದದ್ದು; ದುಷ್ಟತಮವಾದುದು; ಅತ್ಯಂತ ಕೆಟ್ಟದಾದ ಭಾಗ, ಘಟನೆ, ಪರಿಸ್ಥಿತಿ ಯಾ ಸಾಧ್ಯತೆ: the worst of the storm is over ಬಿರುಗಾಳಿಯ ಅತ್ಯಂತ ಭಯಂಕರ ಸ್ವರೂಪ ಮುಗಿದಿದೆ.

ಪದಗುಚ್ಛ
  1. at its worst ಅದರ ಅತ್ಯಂತ ಕೆಟ್ಟಸ್ಥಿತಿಯಲ್ಲಿ, ರೂಪದಲ್ಲಿ, ಅವಧಿಯಲ್ಲಿ.
  2. at (or at the) worst ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲೂ; ಏನೇ ಕೇಡು – ಬಂದರೂ, ಉಂಟಾದರೂ, ಒದಗಿದರೂ.
  3. do your (or let him do his) worst (ಧಿಕ್ಕರಿಸಿ ಮಾತನಾಡುವಲ್ಲಿ) ನೀನು ಏನು ಮಾಡುತ್ತೀಯೋ ಮಾಡು; ನಿನಗೆ ತಿಳಿದಿದ್ದನ್ನು ಮಾಡಿಕೊ ಹೋಗು (ಅವನು ಏನು ಕಡಿಯುತ್ತಾನೋ ಕಡಿಯಲಿ).
  4. get (or have) the worst of it ಸೋತುಹೋಗು; ಪರಾಭವಗೊಳ್ಳು.
  5. if the worst comes to the worst ತೀರಾ ಕೆಟ್ಟಿತೆಂದರೆ; ಒಂದು ವೇಳೆ ಅತ್ಯಂತ ಕೇಡಿನ, ಕೆಟ್ಟ ಸ್ಥಿತಿ ಒದಗಿದರೆ.
  6. the worst of being clever ಬಉದ್ಧಿವಂತಿಕೆಯ ಅತಿ ಕೆಟ್ಟ ಫಲ.
See also 1worst  2worst  3worst
4worst ವರ್ಸ್‍
ಸಕರ್ಮಕ ಕ್ರಿಯಾಪದ

ಸೋಲಿಸು; ಮೇಲುಗೈಯಾಗು; ಮೀರಿಸು: he worsted his enemy ಅವನು ಶತ್ರುವನ್ನು ಸೋಲಿಸಿದ.