wader ವೇಡರ್‍
ನಾಮವಾಚಕ
  1. (ನೀರು, ಹಿಮ, ಕೆಸರು, ಮರಳಿನ ರಾಶಿ, ಮೊದಲಾದವನ್ನು) ಪ್ರಯಾಸದಿಂದ ಹಾಯುವವನು.
  2. (ರೂಪಕವಾಗಿ) (ಕಷ್ಟಗಳು, ರಕ್ತಪ್ರವಾಹ, ಮೊದಲಾದವನ್ನು) ಹಾಯುವವನು.
  3. ಹೊಳೆ ಹಾಯುವವನು.
  4. (ಕಾಲುನಡಗೆಯಿಂದ ನೀರು ಹಾಯುವ) ನೀರಹಕ್ಕಿ.
  5. (ಬಹುವಚನದಲ್ಲಿ) (ಮೀನು ಹಿಡಿಯುವುದೇ ಮೊದಲಾದ ಸಂದರ್ಭದಲ್ಲಿ ಹಾಕಿಕೊಳ್ಳುವ) ನೀರಿಳಿಯದ ಎತ್ತರವಾದ ಮೋಜಾ ಯಾ (ಮೈ, ಕಾಲುಗಳನ್ನು ಮುಚ್ಚುವ) ನೀರಿಳಿಯದ ಉಡುಪು.