vocation ವಕೇಷ(ಷ್‍)ನ್‍
ನಾಮವಾಚಕ
  1. ಅರ್ಹತಾಭಾವನೆ; ನಿರ್ದಿಷ್ಟ ಉದ್ಯೋಗ ಯಾ ವೃತ್ತಿಗೆ ತಾನು ತಕ್ಕವನೆಂಬ, ತನಗೆ ಅರ್ಹತೆಯಿದೆಯೆಂಬ ದೃಢಭಾವನೆ.
  2. ದೈವಪ್ರೇರಣೆ; ದೇವಾದಿಷ್ಟವಾದ ವೃತ್ತಿ; ದೈವ ಸಂಕಲ್ಪಿತ ಕಾರ್ಯ ಯಾ ಸ್ಥಿತಿ; ದೈವಪ್ರೇರಿತವೆಂದು ಭಾವಿತವಾದ ವೃತ್ತಿ ಯಾ ಉದ್ಯೋಗ: he felt no vocation for the ministry ಪಾದ್ರಿವೃತ್ತಿಗೆ ಅವನಲ್ಲಿ ದೈವಪ್ರೇರಣೆಯಿರಲಿಲ್ಲ.
  3. (ಅಂತಃ)ಪ್ರೇರಣೆ; ಪ್ರವೃತ್ತಿ; ಒಲವು: he has no vocation to literature ಅವನಿಗೆ ಸಾಹಿತ್ಯರಚನೆಯತ್ತ ಒಲವಿಲ್ಲ, ಪ್ರವೃತ್ತಿಯಿಲ್ಲ.
  4. (ಮುಖ್ಯವಾಗಿ ಶ್ರದ್ಧೆ ತೋರಬೇಕೆಂದು ಪರಿಗಣಿತವಾದ) ವ್ಯಕ್ತಿಯ – ವೃತ್ತಿ, ಕಸುಬಉ, ಉದ್ಯೋಗ.
  5. ಯಾವುದೇ ಉದ್ಯೋಗ, ವೃತ್ತಿ, ಕಸುಬಉ.
ಪದಗುಚ್ಛ

mistook his vocation ತನಗೆ ಒಗ್ಗುವ ವೃತ್ತಿ ಹಿಡಿಯಲಿಲ್ಲ, ತಿಳಿಯಲಿಲ್ಲ.