vocalize ವೋಕಲೈಸ್‍
ಸಕರ್ಮಕ ಕ್ರಿಯಾಪದ
    1. ಧ್ವನಿ, ಶಬ್ದ – ಮಾಡು, ಉಚ್ಚರಿಸು.
    2. ಘೋಷ(ವರ್ಣ)ವಾಗಿಸು, ಉದಾ. k is vocalized into g ಕ ಅನ್ನು ಗ ಆಗಿ ಉಚ್ಚರಿಸಲಾಗಿದೆ.
  1. (ಹೀಬಊ ಮೊದಲಾದ ಭಾಷೆಗಳಿಗೆ) ಸ್ವರಚಿಹ್ನೆ ಹಾಕಿ ಬರೆ.
ಅಕರ್ಮಕ ಕ್ರಿಯಾಪದ
  1. (ಹಾಸ್ಯದಲ್ಲಿ) ಹೇಳು; ಒರಲು; ಒದರು; ಅರಚು.
  2. (ಸಂಗೀತ) (ಅಲಂಕಾರಮಯವಾದ ಭಾಗವನ್ನು) ಪಲುಕುಪಲುಕಾಗಿ ಹಾಡು.
  3. ಉಚ್ಚರಿಸು.