vocabulary ವಕ್ಯಾಬಉಲರಿ
ನಾಮವಾಚಕ
(ಬಹುವಚನ vocabularies).
  1. ಶಬ್ದಕೋಶ; ಪದಪಟ್ಟಿ:
    1. ಒಂದು ಭಾಷೆಯ ಯಾ ಒಂದು ಪುಸ್ತಕದಲ್ಲಿ ಯಾ ಒಂದು ವಿಜ್ಞಾನ, ಕಲೆ, ಶಾಸ್ತ್ರ, ಮೊದಲಾದವುಗಳಲ್ಲಿ ಯಾ ಒಬ್ಬ ಗ್ರಂಥಕರ್ತನು ಬಳಸಿರುವ ಪದಗಳು: the ever-increasing scientific vocabulary ಸದಾ ಹೆಚ್ಚುತ್ತಲೇ ಇರುವ ವಿಜ್ಞಾನ ಪದಕೋಶ.
    2. ಅಕಾರಾದಿಯಾಗಿ ಜೋಡಿಸಿ, ಅರ್ಥಗಳನ್ನು ಯಾ ಅನುವಾದಗಳನ್ನು ನೀಡಿರುವ ಆ ಪದಗಳ ಪಟ್ಟಿ.
  2. ಒಬ್ಬನ ಶಬ್ದ – ಸಂಪತ್ತು, ಭಂಡಾರ; ವ್ಯಕ್ತಿಯೊಬ್ಬನಿಗೆ ತಿಳಿದಿರುವ ಪದಗಳ ವ್ಯಾಪ್ತಿ: his vocabulary is limited ಅವನ ಶಬ್ದಸಂಪತ್ತು ಪರಿಮಿತವಾದದ್ದು. a word not found in the Chaucerian vocabulary ಚಾಸರ್‍ ಕವಿಯ ಶಬ್ದಭಂಡಾರದಲ್ಲಿ ಕಂಡುಬರದ ಒಂದು ಪದ.
  3. ಕಲಾರೂಪಗಳ, ಶೈಲಿರೂಪಗಳ ಯಾ ತಂತ್ರಗಳ (ಮುಖ್ಯವಾಗಿ ಬ್ಯಾಲೆ ಮೊದಲಾದ ನೃತ್ಯಗಳ ನ್ಯಾಸಗಳ) ತಂಡ.