violent ವೈಅಲಂಟ್‍
ಗುಣವಾಚಕ
  1. ಹಿಂಸೆಯ; ಹಿಂಸಾತ್ಮಕ.
  2. ರಭಸದ; ಬಿರುಸಾದ; ಜೋರಾದ; ಪ್ರಚಂಡ: a violent storm ಪ್ರಚಂಡ ಮಾರುತ (ಮತ್ತು ಬಿರುಮಳೆ). the scooter came into violent collision with the bus ಆ ಸ್ಕೂಟರು ಬಸ್ಸಿಗೆ ಬಿರುಸಾಗಿ ಡಿಕ್ಕಿ ಹೊಡೆಯಿತು.
  3. ಜುಲುಮಿನ; ಅಕ್ರಮವಾಗಿ ಯಾ ನ್ಯಾಯಬಾಹಿರವಾಗಿ ಬಲಪ್ರಯೋಗವನ್ನು, ಬಲಾತ್ಕಾರವನ್ನು, ಒಳಗೊಂಡ: he laid violent hands on the opponent ಅವನು ಎದುರಾಳಿಯ ಮೇಲೆ ಅಕ್ರಮವಾಗಿ ಕೈಮಾಡಿದ.
  4. ತೀವ್ರ; ಭಾರಿ; ಉಗ್ರ; ಬಿರುಸಾದ; ಪ್ರಚಂಡ: violent pain ತೀವ್ರವಾದ ಯಾತನೆ. violent abuse ಉಗ್ರವಾದ ಬೈಗುಳ. violent controversy ಬಿರುಸಾದ ವಾದವಿವಾದ. violent discrepancy ಭಾರಿ ವ್ಯತ್ಯಾಸ. violent contrast ತೀವ್ರವಾದ ಅಸಾದೃಶ್ಯ. violent shock ಭಾರಿ ಆಘಾತ.
  5. ರೋಷಾವೇಶದ; ಭಾವಾವೇಶದ: violent quarrel ರೋಷಾವೇಶದ ಜಗಳ.
  6. ಕಡು; ತೀವ್ರ; ಕಣ್ಣಿಗೆ ರಾಚುವ, ಬಡಿಯುವಂತಿರುವ : violent colours ಕಡು ಬಣ್ಣಗಳು; ಕಣ್ಣಿಗೆ ಬಡಿಯುವಂಥ ಬಣ್ಣಗಳು.
  7. (ಸಾವಿನ ವಿಷಯದಲ್ಲಿ) ಬಲವಂತದ; ಬಾಹ್ಯ ಬಲಪ್ರಯೋಗ ದಿಂದ ಯಾ ವಿಷದಿಂದ ಸಂಭವಿಸಿದ.