See also 2veteran
1veteran ವೆಟರನ್‍
ನಾಮವಾಚಕ
  1. (ಯಾವುದೇ ವೃತ್ತಿಯಲ್ಲಿ ಯಾ ಕಸಬಿನಲ್ಲಿ, ಮುಖ್ಯವಾಗಿ ಸೈನಿಕ ಸೇವೆಯಲ್ಲಿ) ನುರಿತವನು; ಅನುಭವಿ; ಪಳಗಿದವನು; ಪರಿಣತ; ದೀರ್ಘಾನುಭವ ಪಡೆದವನು ಯಾ ಅದರಲ್ಲೇ ಆಯುಷ್ಯವನ್ನು ಕಳೆದವನು: a veteran of two world wars ಎರಡು ವಿಶ್ವಯುದ್ಧಗಳ ಅನುಭವಿ ಸೈನಿಕ, ಯೋಧ. a veteran golfer ಪರಿಣತ ಗಾಲ್‍ ಆಟಗಾರ.
  2. (ಅಮೆರಿಕನ್‍ ಪ್ರಯೋಗ) ಮಾಜಿ – ಸೈನಿಕ, ಭಟ, ಯೋಧ; ಮುಖ್ಯವಾಗಿ ಮಹಾಯುದ್ಧಗಳಲ್ಲಿ ಪಾಲುಗೊಂಡು ನಿವೃತ್ತನಾದವನು(ಳು).
See also 1veteran
2veteran ವೆಟರನ್‍
ಗುಣವಾಚಕ
  1. ಅನುಭವಿಯ; ನುರಿತವನ; ಪಳಗಿದವನ.
  2. ಅನುಭವಿಗಳಿಗಾಗಿ ಇರುವ ಯಾ ಸಂಘಟಿತವಾಗಿರುವ.