vestibule ವೆಸ್ಟಿಬಊಲ್‍
ನಾಮವಾಚಕ
  1. ಒಳ ಕೋಣೆ, ಕೊಠಡಿ, ಹಜಾರ, ನಡವೆ, ನಡುಮನೆ, ಮೊದಲಾದವು.
    1. (ಚರ್ಚ್‍ ಮೊದಲಾದವುಗಳ) ಮೊಗಸಾಲೆ; ಮುಖಮಂಟಪ.
    2. ಸಂಪರ್ಕ – ಕೋಣೆ ಯಾ ಹಾದಿ; ಇನ್ನೊಂದು ಕೋಣೆ ಯಾ ಹಾದಿಯೊಂದಿಗೆ ಸಂಪರ್ಕ ಕಲ್ಪಿಸುವ ಕೋಣೆ ಯಾ ಹಾದಿ.
  2. (ಅಮೆರಿಕನ್‍ ಪ್ರಯೋಗ) ರೈಲ್ವೆಗಾಡಿಗೆ ಪ್ರವೇಶಿಸಲು, ಆವರಣ ಹಾಕಿದ ಪ್ರವೇಶ ಹಾದಿ.
  3. ಹಲ್ಲುಗಳ ಹೊರಗಿನ ಬಾಯಿಭಾಗ.
  4. (ಅಂಗರಚನಾಶಾಸ್ತ್ರ) ಸಂಪರ್ಕ – ಕುಹರ ಯಾ ನಾಳ; ಇತರ ಕುಹರ ಯಾ ನಾಳದೊಂದಿಗೆ ಸಂಪರ್ಕ ಕಲ್ಪಿಸುವ ಕುಹರ ಯಾ ನಾಳ.
  5. ಕಿವಿಕುಹರ; ಒಳಗಿವಿಯ ಕೇಂದ್ರದಲ್ಲಿಯ ಕುಳಿ.
  6. (ಅಮೆರಿಕನ್‍ ಪ್ರಯೋಗ) (ಕೈಗಾರಿಕೆಗಳಲ್ಲಿ ಹೊಸದಾಗಿ ಸೇರಿದ ನೌಕರರಿಗೆ ಶಿಕ್ಷಣ ಕೊಡುವ) ನಡವೆ ಶಾಲೆ; ನಡುಮನೆ ಶಾಲೆ.