See also 2verbal  3verbal
1verbal ವರ್ಬಲ್‍
ಗುಣವಾಚಕ
  1. ಪದಗಳ ಯಾ ಪದಗಳಿಗೆ ಸಂಬಂಧಿಸಿದ; ಶಾಬ್ದಿಕ ಯಾ ಶಾಬ್ದ: verbal subtleties ಶಬ್ದಸೂಕ್ಷ ತೆಗಳು. verbal accuracy ಪದ ನಿಷ್ಕೃಷ್ಟತೆ; ನಿಷ್ಕೃಷ್ಟ ಪದಪ್ರಯೋಗ.
  2. ಶಾಬ್ದ; ಶಾಬ್ದಿಕ; ಪದಗಳನ್ನುಳ್ಳ ಯಾ ಪದರೂಪದ: verbal imagery ಶಾಬ್ದ, ಶಾಬ್ದಿಕ – ಪ್ರತಿಮೆ.
  3. ಕೇವಲ ಶಬ್ದಗಳಿಗೆ ಯಾ ಪದಗಳಿಗೆ ಸಂಬಂಧಿಸಿದ: a purely verbal distinction between two concepts ಎರಡು ಕಲ್ಪನೆಗಳ ನಡುವಣ ಕೇವಲ ಶಾಬ್ದಿಕ ವ್ಯತ್ಯಾಸ.
  4. ವಾಚಿಕ; ವಾಗ್ರೂಪದ; ಬಾಯಿಮಾತಿನ; ಮೌಖಿಕ: ಬರಹದ ಮೂಲಕ ಆಗಿರದೆ ಮಾತಿನ ಮೂಲಕ ತಿಳಿಸಿದ: verbal contract ಬಾಯಿಮಾತಿನ ಯಾ ಮುಖತಃ ಮಾಡಿಕೊಂಡ – ಕರಾರು, ಒಪ್ಪಂದ. verbal evidence ಬಾಯಿಮಾತಿನ, ವಾಚಾ ಹೇಳಿದ, ಮೌಖಿಕ – ಸಾಕ್ಷ್ಯ.
  5. (ಅನುವಾದದ, ತರ್ಜುಮೆಯ ವಿಷಯದಲ್ಲಿ) ಅಕ್ಷರನಿಷ್ಠ; ಪದನಿಷ್ಠ; ಅಕ್ಷರಶಃ, ಪದಶಃ – ಮಾಡಿದ.
  6. (ವ್ಯಾಕರಣ) ಕ್ರಿಯಾ ಪದದ ಯಾ ರೂಪದ: verbal inflexions ಕ್ರಿಯಾಪದದ ಕಾಲ (tense), ಪ್ರಯೋಗ (voice), ಭಾವ (mood), ವಚನ (number) ಮತ್ತು ಪುರುಷ (person) ಎಂಬ ರೂಪಾಂತರಗಳು ಯಾ ರೂಪಭೇದಗಳು.
  7. ವಾಚಾಳಿಯಾದ.
See also 1verbal  3verbal
2verbal ವರ್ಬಲ್‍
ನಾಮವಾಚಕ
    1. (ವ್ಯಾಕರಣ) = verbal noun.
    2. ಕ್ರಿಯಾಪದವಾಗಿ ಕೆಲಸ ಮಾಡುವ ಪದ ಯಾ ಪದಗಳು.
  1. (ಅಶಿಷ್ಟ) (ಮುಖ್ಯವಾಗಿ ಪೊಲೀಸಿನವರಿಗೆ ಕೊಟ್ಟ) ಬಾಯಿಮಾತಿನ, ಮೌಖಿಕ – ಹೇಳಿಕೆ.
  2. (ಅಶಿಷ್ಟ) ಬೈಗುಳ; ನಿಂದೆ: gave them the verbal ಅವರಿಗೆ ಬೈಗುಳ ಹಾಕಿದ; ಅವರನ್ನು ನಿಂದಿಸಿದ, ಬೈದ.
See also 1verbal  2verbal
3verbal ವರ್ಬಲ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ verballed; ವರ್ತಮಾನ ಕೃದಂತ

(ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) (ಶಂಕಿತ ವ್ಯಕ್ತಿ ಅವನಿಗೇ) ತೊಂದರೆ, ಅಪಾಯ, ಹಾನಿ, ಕಳಂಕ – ತರುವಂಥ ಹೇಳಿಕೆ ಕೊಟ್ಟುದಾಗಿ ತಿಳಿಸು, ಹೇಳು.