vein ವೇನ್‍
ನಾಮವಾಚಕ
  1. ಸಿರೆ; ಹೃದಯಕ್ಕೆ ರಕ್ತವನ್ನು ಒಯ್ಯುವ ರಕ್ತನಾಳ.
  2. ಸಿರೆ; ಅಭಿಧಮನಿ; (ಸಾಮಾನ್ಯ ಬಳಕೆಯಲ್ಲಿ) ಯಾವುದೇ ರಕ್ತನಾಳ, ಧಮನಿ: he has a royal blood in his veins ಅವನ ರಕ್ತನಾಳಗಳಲ್ಲಿ ರಾ(ಮನೆತನದ)ರಕ್ತ ಹರಿಯುತ್ತಿದೆ, ಆತ ರಾಜಕುಲಕ್ಕೆ ಸೇರಿದವನು.
  3. ಸಿರೆ; ಕೀಟದ ರೆಕ್ಕೆಯಲ್ಲಿನ ನಾಳದಂಥ ರಚನೆ.
  4. ಪರ್ಣನಾಳ; ಎಲೆಯ ರಚನೆಯಲ್ಲಿರುವ ಹುರಿಯಂಥ ಊತಕ.
  5. (ಭೂವಿಜ್ಞಾನ ಮತ್ತು ಗಣಿಗಾರಿಕೆ) ಸಿರೆ; ಅದಿರು ಮುಂತಾದವುಗಳ ನಿಕ್ಷೇಪವಿರುವ ಶಿಲಾಬಿರುಕು.
  6. (ಮರದ ದಾರು, ಅಮೃತ ಶಿಲೆ, ಹಾಲಿನ ಗಿಣ್ಣು, ಮೊದಲಾದವುಗಳಲ್ಲಿ ನಡುವೆ ಕಾಣುವ ಬೇರೆ ಬಣ್ಣದ) ರೇಖೆ; ಗೆರೆ; ಎಳೆ; ಪಟ್ಟೆ.
  7. ಸ್ವಭಾವ; ಪ್ರವೃತ್ತಿ; ಮನೋವೃತ್ತಿ: he was of an imaginative vein ಆತ ಒಬ್ಬ ಕಲ್ಪನಾತ್ಮಕ ಮನೋವೃತ್ತಿಯವನಾಗಿದ್ದ.
  8. ಧಾಟಿ; ಧೋರಣೆ; ವಿಶಿಷ್ಟ – ಗುಣ, ರೀತಿ, ಶೈಲಿ, ವಿಧಾನ: he said this in a humorous vein ಆತ ಇದನ್ನು ಹಾಸ್ಯಶೈಲಿಯಲ್ಲಿ ಹೇಳಿದ. he made other remarks in the same vein ಆತ ಅದೇ ಧೋರಣೆಯಲ್ಲೇ, ಧಾಟಿಯಲ್ಲೇ ಇತರ ಟೀಕೆಗಳನ್ನೂ ಮಾಡಿದ.