variation ವೇರಿಏಷನ್‍
ನಾಮವಾಚಕ
  1. ಬದಲಾವಣೆ; ಮಾರ್ಪಾಡು; ಪರಿವರ್ತನೆ: prices are subject to variation ಬೆಲೆಗಳು ಬದಲಾವಣೆಗೆ ಒಳಪಟ್ಟಿವೆ; ಬೆಲೆಗಳು ಬದಲಾವಣೆಗೊಳ್ಳುವ ಸಂಭವವಿದೆ.
  2. (ಹಿಂದಿನ ಯಾ ಸಹಜ ಸ್ಥಿತಿಯಿಂದ, ಕ್ರಿಯೆಯಲ್ಲಿ ಯಾ ಮೊತ್ತದಲ್ಲಿ, ಆಗುವ) ವ್ಯತ್ಯಾಸ ಯಾ ಆ ವ್ಯತ್ಯಾಸದ ಪ್ರಮಾಣ: repeated variations of temperature (ಹವಾಮಾನ ಮೊದಲಾದವುಗಳಲ್ಲಿ) ಮತ್ತೆಮತ್ತೆ ಆಗುವ ತಾಪ(ಪ್ರಮಾಣ)ದ ಬದಲಾವಣೆಗಳು, ತಾಪಾಂತರಗಳು. it is subject to variation of several degrees ಅದರ ತಾಪದಲ್ಲಿ ಹಲವು ಡಿಗ್ರಿಗಳಷ್ಟು ವ್ಯತ್ಯಾಸ ಆಗುವ ಸಂಭವವಿದೆ.
  3. (ಖಗೋಳ ವಿಜ್ಞಾನ) ಚ್ಯುತಿ; ಖಾಗೋಳಿಕ ಕಾಯವು ತನ್ನ ಸರಾಸರಿ ಕಕ್ಷೆ ಯಾ ಚಲನೆಯನ್ನು ಬಿಟ್ಟುಹೋಗುವುದು.
  4. (ಗಣಿತ) ವ್ಯತ್ಯಯನ; ಫಲನ ಒಂದರಲ್ಲಿನ ಸ್ಥಿರಗಳು ಮೊದಲಾದವುಗಳಲ್ಲಾಗುವ ಅಲ್ಪ ಬದಲಾವಣೆಯ ಫಲವಾಗಿ ಫಲನದಲ್ಲಾಗುವ ಬದಲಾವಣೆ.
  5. (ಮಾದರಿಗಿಂತ, ನಮೂನೆಗಿಂತ, ಪ್ರಮಾಣಕ್ಕಿಂತ, ಜಾತಿ ಯಾ ವರ್ಗಕ್ಕಿಂತ) ಭಿನ್ನವಾದ ವಸ್ತು, ವಿಷಯ.
  6. (ಸಂಗೀತ) ರಾಗಭೇದ ಯಾ ವಿಷಯಭೇದ; ಕೃತಿಯನ್ನು ಹಾಡುವಲ್ಲಿ ಯಾ ವಾದನ ಮಾಡುವಲ್ಲಿ ಗಾಯಕನು ಯಾ ವಾದನಕಾರನು ಮಾಡುವ ರಾಗದ ಯಾ ವಿಷಯದ ಭೇದ ಯಾ ಅವುಗಳ ವಿಸ್ತರಣ.
  7. (ಬ್ಯಾಲೆ ನೃತ್ಯ) ಏಕ ನರ್ತಕ ಯಾ ನರ್ತಕಿ ನೃತ್ಯ.