variance ವೇರಿಅನ್ಸ್‍
ನಾಮವಾಚಕ
  1. ಅಭಿಪ್ರಾಯಭೇದ; ವಿವಾದ; ಮತಭೇದ; ಭಿನ್ನಾಭಿಪ್ರಾಯ: I have had a slight variance with him ಅವನಿಗೂ ನನಗೂ ಸ್ವಲ್ಪ ಮತಭೇದ ಉಂಟಾಗಿದೆ. on that point we are at variance (among ourselves) ಆ ವಿಷಯವನ್ನು ಕುರಿತು ನಮ್ಮನಮ್ಮಲ್ಲಿ ಭಿನ್ನಾಭಿಪ್ರಾಯವಿದೆ.
  2. ವ್ಯಾಜ್ಯ; ವಿರಸ; ವೈಮನಸ್ಯ: he is at variance with the authorities ಅವನಿಗೂ ಅಧಿಕಾರಿಗಳಿಗೂ ವಿರಸವಿದೆ, ವೈಮನಸ್ಯವಿದೆ.
  3. ವ್ಯತ್ಯಾಸ; ಭೇದ; ತಾರತಮ್ಯ: this theory is at variance with all that is known on the subject ಆ ಶಾಸ್ತ್ರದ ವಿಷಯದಲ್ಲಿ ಇದುವರೆಗೂ ತಿಳಿದಿರುವ ಸಕಲಕ್ಕೂ ಈ ಸಿದ್ಧಾಂತಕ್ಕೂ ವ್ಯತ್ಯಾಸವಿದೆ.
  4. (ನ್ಯಾಯಶಾಸ್ತ್ರ) ಹೇಳಿಕೆ ಹೇಳಿಕೆಗೂ ಯಾ ಪತ್ರಪತ್ರಕ್ಕೂ ನಡುವೆ ಕಂಡುಬರುವ – ವ್ಯತ್ಯಾಸ, ಭೇದ, ತಾರತಮ್ಯ, ಅಸಾಮಂಜಸ್ಯ.
  5. (ಸಂಖ್ಯಾಶಾಸ್ತ್ರ) ವಿಪಲ್ಲಟ; ಪ್ರಮಾಣಕ ವಿಚಲನ ಯಾ ದಿಕ್ಚ್ಯುತಿಯ (standard deviation) ವರ್ಗ.
  6. (ಅಮೆರಿಕನ್‍ ಪ್ರಯೋಗ) ಮಾಮೂಲು ನಿಯಮಗಳನ್ನು ಬಿಟ್ಟು ಕಾರ್ಯನಿರ್ಣಯ ಯಾ ಕಾರ್ಯ ಮಾಡಲು ಕೊಡಲಾದ ಅನುಮತಿ; (ನಿಯಮದಿಂದಾಚೆ ಹೋಗುವ) ವಿವೇಚನಾಧಿಕಾರ.