untoward ಅನ್‍ಟವರ್ಡ್‍, ಅನ್‍ಟೋಅರ್ಡ್‍
ಗುಣವಾಚಕ
  1. (ಪ್ರಾಚೀನ ಪ್ರಯೋಗ) ವಕ್ರ; ಮೂರ್ಖ; ಅಡ್ಡಮಾರ್ಗದ; ಅಂಕೆಗೊಳಪಡದ.
  2. (ಗತಪ್ರಯೋಗ) ಅಡ್ಡಾದಿಡ್ಡಿಯ; ಎಡವಟ್ಟಾದ.
  3. ದುರದೃಷ್ಟದ; ನಿರ್ಭಾಗ್ಯ; ದುಷ್ಪರಿಣಾಮದ: untoward circumstances forced him into bankruptcy ದುರದೃಷ್ಟಕರ ಸನ್ನಿವೇಶಗಳು ಅವನನ್ನು ದಿವಾಳಿತನಕ್ಕೆ ತಳ್ಳಿದವು.
  4. ಅನುಚಿತವಾದ; ಯುಕ್ತವಲ್ಲದ; ಯೋಗ್ಯವಲ್ಲದ: untoward social behaviour ಅನುಚಿತವಾದ ಸಾಮಾಜಿಕ ನಡವಳಿಕೆ.