unite ಯು(ಯೂ)ನೈಟ್‍
ಸಕರ್ಮಕ ಕ್ರಿಯಾಪದ
  1. ಸೇರಿಸು; ಕೂಡಿಸು; ಸಂಯೋಜಿಸು; ಒಂದುಗೂಡಿಸು; ಒಂದುಮಾಡು; ಒಟ್ಟುಗೂಡಿಸು; ಏಕೀಕರಿಸು: unite the parts with cement ಸಿಮೆಂಟಿನಿಂದ ಬಿಡಿಭಾಗಗಳನ್ನು ಸೇರಿಸು.
  2. ಮದುವೆಯಿಂದ ಸಂಬಂಧ ಕಲ್ಪಿಸು, ಒಂದುಗೂಡಿಸು ( ಅಕರ್ಮಕ ಕ್ರಿಯಾಪದ ಸಹ).
  3. (ಗುಣಗಳು, ಲಕ್ಷಣಗಳು, ಮೊದಲಾದವನ್ನು) ಒಟ್ಟಿಗೆ ಹೊಂದಿರು; ಸೇರಿಸಿಕೊಂಡಿರು; ಕೂಡಿಸಿಕೊಂಡಿರು: united anger with mercy ದಯೆಯೊಂದಿಗೆ ಕೋಪವನ್ನು ಸೇರಿಸಿಕೊಂಡಿದ್ದ.
  4. (ಭೌತಿಕವಾಗಿ ಯಾ ರಾಸಾಯನಿಕವಾಗಿ) ಒಂದುಗೂಡಿಸು; ಸೇರಿಸು; ಸಂಯೋಜಿಸು.
ಅಕರ್ಮಕ ಕ್ರಿಯಾಪದ
  1. ಒಂದಾಗು; ಸೇರು; ಕೂಡು; ಒಟ್ಟಾಗು; ಏಕೀಭವಿಸು; ಸಂಯೋಗವಾಗು: oil will not unite with water ಎಣ್ಣೆ ನೀರಿನೊಡನೆ ಸೇರಿಕೊಳ್ಳುವುದಿಲ್ಲ.
  2. (ಒಂದೇ ಉದ್ದೇಶಕ್ಕಾಗಿ) ಕೂಡಿಕೊ; ಹೊಂದಿಕೊ; ಒಗ್ಗಟ್ಟಾಗು; ಐಕಮತ್ಯದಿಂದಿರು: unite in sentiment ಭಾವೈಕ್ಯವಾಗು. united in their struggle against injustice ಅನ್ಯಾಯದ ವಿರುದ್ಧ ಹೋರಾಟಕ್ಕೆ ಅವರು ಒಗ್ಗೂಡಿದರು.