unilateral ಯೂನಿಲ್ಯಾಟರ(ರ್‍)ಲ್‍
ಗುಣವಾಚಕ
  1. ಏಕಪಕ್ಷೀಯ; ಒಂದೇ ಪಕ್ಷದ; ಒಮ್ಮಗ್ಗುಲಿನ.
  2. ಒಂದೇ ಪಕ್ಷ ಯಾ ವ್ಯಕ್ತಿಗೆ ಸಂಬಂಧಿಸಿದ; ಒಂದೇ ಪಕ್ಷ ಯಾ ವ್ಯಕ್ತಿ ಕೈಕೊಂಡ: unilateral declaration of independence ಏಕಪಕ್ಷೀಯವಾದ ಸ್ವಾತಂತ್ರ್ಯ ಘೋಷಣೆ.
  3. (ರಸ್ತೆಯ ಬದಿಯಲ್ಲಿ ವಾಹನಾದಿಗಳನ್ನು ನಿಲ್ಲಿಸುವ ವಿಷಯದಲ್ಲಿ) ರಸ್ತೆಯ ಒಮ್ಮಗ್ಗಲಿಗೆ ಮಾತ್ರ ನಿಯಮಿತವಾದ; ಒಂದೇ ಪಕ್ಕದ.
  4. (ಸಸ್ಯಗಳ ವಿಷಯದಲ್ಲಿ) ಏಕಪಾರ್ಶಕ; ಏಕಪಾಶ್ವೀಯ; ತಾಳಿನ ಒಂದೇ ಪಕ್ಕದಿಂದ ಹೊರಟಿರುವ, ಒಂದೇ ಪಕ್ಕದಲ್ಲಿರುವ.
  5. (ಸಂತತಿಯ ವಂಶಾನುಕ್ರಮದ ವಿಷಯದಲ್ಲಿ) ಏಕಲಿಂಗದ; ಒಂದೇ ಲಿಂಗದ ಪೂರ್ವಿಕರಿಂದ ಬಂದ.