unicorn ಯೂನಿಕಾರ್ನ್‍
ನಾಮವಾಚಕ
  1. ಏಕಶೃಂಗಿ; ಒಕ್ಕೊಂಬಿ:
    1. ಕುದುರೆಯ ಮೈ ಹಾಗೂ ಹಣೆಯ ಮೇಲೆ ಒಂದೇ ನೇರ ಕೊಂಬಉ ಉಳ್ಳದೆಂದು (ಗ್ರೀಕ್‍) ಪುರಾಣಪ್ರಸಿದ್ಧವಾದ ಪ್ರಾಣಿ. Figure: unicorn
    2. (ಹಳೆಯ ಒಡಂಬಡಿಕೆ) ಎರಡು ಕೊಂಬಿನ ಪ್ರಾಣಿ, ಪ್ರಾಯಶಃ ಕಾಡೆತ್ತು.
    3. ತಿರುಚಿದ ಕೊಂಬಉ, ಜಿಂಕೆಯ ಪಾದಗಳು, ಹೋತನ ಗಡ್ಡ ಹಾಗೂ ಸಿಂಹದ ಬಾಲವಿರುವ, ಬ್ರಿಟಿಷ್‍ ರಾಜವಂಶ ಲಾಂಛನದಲ್ಲಿ ನಿರೂಪಿಸಲಾಗಿರುವ, ಏಕಶೃಂಗಿಯ ಚಿತ್ರ.
    1. ಮುಂದುಗಡೆ ಮೂರನೆಯ ಕುದುರೆ ಹೂಡಿರುವ ಜೋಡಿ ಕುದುರೆ.
    2. ಇಂಥ ಕುದುರೆಗಳ ಸಜ್ಜು, ಗಾಡಿ.
  2. = narwhal.
ಪದಗುಚ್ಛ

sea-unicorn = unicorn \((3)\).