typical ಟಿಪಿಕಲ್‍
ಗುಣವಾಚಕ
  1. ಮಾದರಿಯ; ಪ್ರಾತಿನಿಧಿಕ: a typical plant ಮಾದರಿ, ಪ್ರಾತಿನಿಧಿಕ–ಗಿಡ, ಸಸ್ಯ. a typical Scotsman ಮಾದರಿ ಸ್ಕಾಟ್ಲೆಂಡಿನವನು.
  2. ಮಾದರಿಯೊಂದಕ್ಕೆ ವಿಶಿಷ್ಟವಾದ, ಲಕ್ಷಣವಾದ, ಅದರ ಗುಣಲಕ್ಷಣವಾದ ಯಾ ಅದನ್ನು ಇತರವುಗಳಿಂದ ಬೇರ್ಪಡಿಸುವ: typical phraseology ವಿಶಿಷ್ಟ ಪದಪ್ರಯೋಗ, ಪದಬಂಧ.
  3. ವೈಶಿಷ್ಟ್ಯದ; ವೈಲಕ್ಷಣ್ಯವಾಗಿರುವ; ನಿರೀಕ್ಷಿತ ನಡೆವಳಿಕೆ, ಭಾವನೆಗಳು, ದೃಷ್ಟಿಕೋನಗಳಿಗೆ ಅನುಗುಣವಾಗಿರುವ: is typical of them to forget ಮರೆಯುವುದು ಅವರ ವೈಶಿಷ್ಟ್ಯ.
  4. ಸಾಂಕೇತಿಕ.