See also 2type
1type ಟೈಪ್‍
ನಾಮವಾಚಕ
  1. ಮಾದರಿ; ನಮೂನೆ; ಬಗೆ; ನಿದರ್ಶನ; ಯಾವುದರದೇ ನಿದರ್ಶನ, ಸಂಕೇತ ಯಾ ವೈಶಿಷ್ಟಪೂರ್ಣ ಮಾದರಿ–ಆಗಿರುವ ವ್ಯಕ್ತಿ, ವಸ್ತು ಯಾ ಘಟನೆ: he is an admirable type of modern athletism ಅವನು ಆಧುನಿಕ ಮಲ್ಲಶಿಕ್ಷಣಕ್ಕೆ ಶ್ಲಾಘನೀಯ ನಿದರ್ಶನವಾಗಿದ್ದಾನೆ.
  2. (ಆಡುಮಾತು) ವಿಶಿಷ್ಟ ವೃತ್ತಿ, ಸ್ವಭಾವ, ಮೊದಲಾದ ನಿರ್ದಿಷ್ಟ ಲಕ್ಷಣದ ವ್ಯಕ್ತಿ: a couple of civil service types ಒಂದಿಬ್ಬರು ಆಡಳಿತಾಧಿಕಾರಿ ವ್ಯಕ್ತಿಗಳು. is rather a quiet type ಸ್ವಲ್ಪಮಟ್ಟಿಗೆ ಶಾಂತಸ್ವಭಾವದವನು. is not really my type ಅವನು ನಿಜವಾಗಿಯೂ ನನ್ನಂಥವನಲ್ಲ.
    1. ವರ್ಗ; ಕೆಲವು ಸಾಮಾನ್ಯ ಗುಣಲಕ್ಷಣಗಳುಳ್ಳ ವರ್ಗದ ವಸ್ತು, ವ್ಯಕ್ತಿ ಯಾ ಅವುಗಳ ಗುಂಪು.
    2. ವಿಧ; ಬಗೆ; ಮಾದರಿ; ತರಹ; ನಮೂನೆ: her beauty was of another type ಅವಳ ಸೌಂದರ್ಯ ಬೇರೆ ನಮೂನೆಯದಾಗಿತ್ತು. would like a different type of car ಬೇರೆ ಮಾದರಿಯ ಕಾರನ್ನು ಇಷ್ಟಪಡುತ್ತಾನೆ.
  3. ‘ಯಾವುದೇ ಒಂದನ್ನು ಹೋಲುವ’ ‘ಯಾವುದೇ ಒಂದರಿಂದ ಮಾಡಿದ’, ‘ಅಂತೆ ಕೆಲಸ ಮಾಡುವ’ ಮೊದಲಾದ ಅರ್ಥದ ಶಬ್ದಗಳಲ್ಲಿ ಸಮಾಸ ಉತ್ತರ ಪದವಾಗಿ ಪ್ರಯೋಗ: ceramic-type material ಜೇಡಿಮಣ್ಣಿನಂಥ ವಸ್ತು.
  4. (ಜೀವವಿಜ್ಞಾನ) ಮಾದರಿ (ರಚನಾಕ್ರಮ): deviates from the type ಅದು ಮಾದರಿಗಿಂತ ಭಿನ್ನವಾಗುತ್ತದೆ.
  5. (ಒಂದೇ ರಚನಾಕ್ರಮದ) ಪ್ರಾಣಿ ಯಾ ಸಸ್ಯ ವರ್ಗ: the vertebrate type ಕಶೇರುಕ ವರ್ಗ.
  6. ಜೀವಿ ಜಾತಿ; ಮಾದರಿ ಜಾತಿ.
  7. (ದೇವತಾಶಾಸ್ತ್ರ) (ಬೈಬಲ್‍) (ಘಟನೆ ಯಾ ವ್ಯಕ್ತಿಗಳ ವಿಷಯದಲ್ಲಿ) ಭವಿಷ್ಯದ–ಲಕ್ಷಣ, ಕುರುಹು, ಸಂಕೇತ.
  8. (ಕಲೆ) ಆದರ್ಶ, ಮಾದರಿ–ಕೃತಿ, ಕಲ್ಪನೆ; ಮುಂದಿನ ಕಲಾಕಾರರಿಗೆ ಮಾದರಿಯಾಗುವ ವಸ್ತು, ಕಲ್ಪನೆ ಯಾ ಕಲಾಕೃತಿ.
  9. ಚಿತ್ರಾಂಕನ; ಪದಕದ ಯಾ ನಾಣ್ಯದ ಎರಡು ಮುಖಗಳಲ್ಲೂ ಇರುವ ನಮೂನೆ.
  10. (ಮುದ್ರಣ)
    1. ಅಚ್ಚಿನ ಮೊಳೆ.
    2. ಅಂಥ ಮೊಳೆಗಳ ಆಕಾರ, ಅಳತೆ ಯಾ ಸೈಜು: printed in large type ದೊಡ್ಡ ಅಚ್ಚಿನ ಮೊಳೆಗಳಿಂದ ಮುದ್ರಿತವಾಗಿದೆ.
    3. (ಜ್ಯಾತ್ಯೇಕವಚನವಾಗಿ) ಅಚ್ಚಿನ ಮೊಳೆಗಳು: short of type ಅಚ್ಚಿನ ಮೊಳೆಗಳು ಕೊರತೆಯಾದ, ಸಾಲದೆ ಹೋದ.
ಪದಗುಚ್ಛ

in type (ಮುದ್ರಣ)ಮೊಳೆಗಳನ್ನು ಜೋಡಿಸಿದ; ಮುದ್ರಣಕ್ಕೆ ಸಿದ್ಧವಾದ.

See also 1type
2type ಟೈಪ್‍
ಸಕರ್ಮಕ ಕ್ರಿಯಾಪದ
  1. (ಯಾವುದರದೇ) ಒಂದು ಮಾದರಿ, ನಮೂನೆ, ನಿದರ್ಶನ–ಆಗು; ಪ್ರತಿನಿಧಿಸು.
  2. ಬೆರಳಚ್ಚು ಮಾಡು ( ಅಕರ್ಮಕ ಕ್ರಿಯಾಪದ ಸಹ).
  3. (ಮುಖ್ಯವಾಗಿ ಜೀವವಿಜ್ಞಾನ ಮತ್ತು ವೈದ್ಯಶಾಸ್ತ್ರ) ಒಂದು ವರ್ಗ, ಗುಂಪು, ಮಾದರಿ, ಮೊದಲಾದವಕ್ಕೆ ಸೇರಿಸು; ವರ್ಗೀಕರಣಮಾಡು ( ಅಕರ್ಮಕ ಕ್ರಿಯಾಪದ ಸಹ).
  4. = typecast.