tympanum ಟಿಂಪನಮ್‍
ನಾಮವಾಚಕ
(ಬಹುವಚನ tympanums ಯಾ tympana ಉಚ್ಚಾರಣೆ ಟಿಂಪನ.)
  1. (ಅಂಗರಚನಾಶಾಸ್ತ್ರ) ನಡುಕಿವಿ; ಮಧ್ಯಕಿವಿ.
  2. ಕಿವಿಯ ಹರೆ.
  3. (ಪ್ರಾಣಿವಿಜ್ಞಾನ) (ಬಾತು ಕೋಳಿ ಮೊದಲಾದವುಗಳಲ್ಲಿ) ಶ್ವಾಸನಾಳದ ಹರೆ; ಶ್ವಾಸನಾಳದ ಬಉಡದಲ್ಲಿ ಅನುರಣನ ಪೊರೆಯುಳ್ಳ ಭಾಗ.
  4. (ಕೀಟಗಳ ಕಾಲು ಮೊದಲಾದವುಗಳ ಮೇಲಿನ) ಶ್ರವಣಾಂಗವನ್ನು ಮುಚ್ಚಿದ ಪೊರೆ.
  5. (ವಾಸ್ತುಶಿಲ್ಪ) Figure: tymponum
    1. ಕಟ್ಟಡದ ಮುಖಮಂಟಪದ ಮೇಲಿನ ತ್ರಿಕೋನಾಕೃತಿಯ ಒಡಲು.
    2. ಕದದ ಪುಟೀಪು; ಬಾಗಿಲವಾಡದ ಮೇಲಿನ ಹಾಸುಗಲ್ಲಿಗೂ ಕಮಾನಿಗೂ ನಡುವಣ ತ್ರಿಕೋನಾಕೃತಿಯ ಸ್ಥಳ.
    3. ಕದದ ಪುಟೀಪಿನಲ್ಲಿ ಮಾಡಿದ ಕೆತ್ತನೆ.
  6. (ನದಿ ಮೊದಲಾದವುಗಳಿಂದ) ನೀರೆತ್ತುವ ಉರುಳೆ ಚಕ್ರ, ರಾಟೆ.