twopence ಟಪನ್ಸ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ)

  1. (ಬ್ರಿಟನ್ನಿನ ನಾಣ್ಯ) ಎರಡು ಪೆನಿ.
  2. (ಆಡುಮಾತು) (ಮುಖ್ಯವಾಗಿ ನಿಷೇಧಾರ್ಥಕದೊಡನೆ) ಅಲ್ಪಬೆಲೆಯ, ಅಗ್ಗದ, ಕ್ಷುಲ್ಲಕ–ವಸ್ತು: twopence coloured ತೀರಾ ಅಗ್ಗದ ಮತ್ತು ಥಳುಕಿನ. I don’t care twopence ನಾನು ಮೂರುಕಾಸಿನ ಬೆಲೆ ಕೊಡುವುದಿಲ್ಲ.