two-way ಟೂವೇ
ಗುಣವಾಚಕ

ದ್ವಿಮಾರ್ಗೀಯ; ದ್ವಿಮಾರ್ಗದ:

  1. (ವಿದ್ಯುತ್‍ ಸ್ವಿಚ್ಚಿನ ವಿಷಯದಲ್ಲಿ) ಎರಡು ತುದಿಗಳಿಂದಲೂ ಸ್ವಿಚ್‍ ಹಾಕಲು, ಆರಿಸಲು ಸಾಧ್ಯವಿರುವ.
  2. (ನಲ್ಲಿ ತಿರುಪಿನ ವಿಷಯದಲ್ಲಿ) ಎರಡರಲ್ಲಿ ಯಾವ ಕಡೆ ಬೇಕಾದರೂ ದ್ರವ ಹರಿಯಲು ಅವಕಾಶ ಕೊಡುವ.
  3. (ವಾಹನಸಂಚಾರ ಮೊದಲಾದವುಗಳ ವಿಷಯದಲ್ಲಿ) ಇದ್ದಾರಿಯ; ದ್ವಿಮುಖದ; ಎರಡು ವಿರುದ್ಧ ದಿಕ್ಕುಗಳಲ್ಲಿ ವಾಹನಗಳು ಸಂಚರಿಸಲು ಅನುಕೂಲಿಸಿರುವ.
  4. ಎರಡು ರೀತಿಗಳನ್ನು ಯಾ ಪಾಲುದಾರರನ್ನು ಒಳಗೊಂಡ.
  5. (ರೇಡಿಯೋ ವಿಷಯದಲ್ಲಿ) ದ್ವಿಮುಖಿ; ದ್ವಿಮಾರ್ಗಿ; ಸಂಕೇತಗಳನ್ನು ರವಾನಿಸಲು ಮತ್ತು ಸ್ವೀಕರಿಸಲು ಸಾಧ್ಯವಾದ.