See also 2twine
1twine ಟ್ವೈನ್‍
ನಾಮವಾಚಕ
  1. (ಸೆಬಉ, ಹತ್ತಿ, ಮೊದಲಾದವುಗಳ, ಎರಡು ಮೂರು ಎಳೆಗಳನ್ನು ಹೊಸೆದು ಮಾಡಿದ, ಗಟ್ಟಿಮುಟ್ಟಾದ) ಹುರಿ; ಟ್ವೈನ್‍ದಾರ.
  2. ಸುರುಳಿ; ಸಿಂಬಿ; ನುಲಿಕೆ; ತಿರುಚು.
  3. ಹೆಣಿಗೆ; ಗೋಜು; ಸಿಕ್ಕು; ಗೋಜಲು.
See also 1twine
2twine ಟ್ವೈನ್‍
ಸಕರ್ಮಕ ಕ್ರಿಯಾಪದ
  1. (ಹುರಿ ಯಾ ದಾರವನ್ನು) ಹೊಸೆ; (ಹೊಸೆದು) ಹುರಿಮಾಡು.
  2. (ಮಾಲೆ ಮೊದಲಾದವನ್ನು) ಹೆಣೆ; ಹೆಣೆದು ಮಾಲೆ ಮಾಡು.
  3. (ಹಣೆ, ಹುಬಉ, ಕಮಾನು, ಮೊದಲಾದವನ್ನು) (ಮಾಲೆ ಮೊದಲಾದವುಗಳಿಂದ) ಸುತ್ತುವರಿ; ಸುತ್ತುಕಟ್ಟು; ಸುತ್ತ ಅಲಂಕರಿಸು.
  4. ಹೆಣೆ; ಹೆಣಿಗೆ ಹಾಕು.
  5. ಸುತ್ತುಗಟ್ಟು; ಸುರುಳಿಸುತ್ತು.
ಅಕರ್ಮಕ ಕ್ರಿಯಾಪದ

(ಆತ್ಮಾರ್ಥಕ ಸಹ) (ಗಿಡ, ಹಾವು, ಮೊದಲಾದವುಗಳ ವಿಷಯದಲ್ಲಿ) ಸಿಂಬಿ, ಸುರುಳಿ–ಸುತ್ತಿಕೊ.

ಪದಗುಚ್ಛ

twine round (or about) ಸುರುಳಿ, ಸಿಂಬಿ–ಸುತ್ತಿಕೊ, ನುಲಿದುಕೊ, ಹೆಣೆದುಕೊ.