See also 2twin  3twin
1twin ಟ್ವಿನ್‍
ಗುಣವಾಚಕ
  1. (ಮುಖ್ಯವಾಗಿ ಒಂದೇ ಸಲ ಹುಟ್ಟಿದ ಮಕ್ಕಳು ಯಾ ಪ್ರಾಣಿಗಳ ವಿಷಯದಲ್ಲಿ) ಅವಳಿ(ಜವಳಿ); ಯಮಳ; ಯುಗಳ: twin children ಅವಳಿ(ಜವಳಿ) ಮಕ್ಕಳು. twin brothers ಅವಳಿ ಸಹೋದರರು.
  2. (ಸಸ್ಯವಿಜ್ಞಾನ) ಜೊತೆಯಾಗಿ, ಜೋಡಿಯಾಗಿ–ಬೆಳೆಯುವ.
  3. ಜೋಡಿ; ಜೊತೆ; ಪರಸ್ಪರ ನಿಕಟ ಸಂಬಂಧವಿರುವ ಎರಡು ಸದೃಶ ಭಾಗಗಳುಳ್ಳ.
See also 1twin  3twin
2twin ಟ್ವಿನ್‍
ನಾಮವಾಚಕ
  1. ಅವಳಿ–ಮಗು ಯಾ ಪ್ರಾಣಿ.
  2. (ವ್ಯಕ್ತಿಯ ಯಾ ವಸ್ತುವಿನ) ಪಡಿ; ಜೋಡಿ; ಜೊತೆ.
  3. ಯಮಳ ಸ್ಫಟಿಕ; ಒಂದರ ಭಾಗಗಳು ಮತ್ತೊಂದರ ಭಾಗಗಳಿಗೆ ಪರಸ್ಪರ ವಿಮುಖ ಸ್ಥಿತಿಯಲ್ಲಿರುವ ಸಂಯುಕ್ತ ಸ್ಫಟಿಕ.
ಪದಗುಚ್ಛ

the Twins

  1. ಮಿಥುನ ರಾಶಿ ಯಾ ಅದರ ಚಿಹ್ನೆ.
  2. ಮಿಥುನರಾಶಿಯ ನಕ್ಷತ್ರಗಳು.
See also 1twin  2twin
3twin ಟ್ವಿನ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ twinned; ವರ್ತಮಾನ ಕೃದಂತ twinning).
ಸಕರ್ಮಕ ಕ್ರಿಯಾಪದ

(ಎರಡನ್ನು) ಒಟ್ಟುಮಾಡು; ಜತೆಗೂಡಿಸು; ಜೋಡಿ ಮಾಡು.

ಅಕರ್ಮಕ ಕ್ರಿಯಾಪದ
  1. ಜತೆಯಾಗು; ಜೋಡಿಯಾಗು; ಒಟ್ಟಾಗು.
  2. ಅವಳಿಮಗು ಹೆರು.
  3. ಯಮಳ ಸ್ಫಟಿಕವಾಗಿ ರೂಪಗೊಳ್ಳು.