twilight ಟ್ವೈಲೈಟ್‍
ನಾಮವಾಚಕ
  1. ಮಬಉ; ಮಂದ ಪ್ರಕಾಶ; ಸೂರ್ಯನು (ಸಾಮಾನ್ಯವಾಗಿ ಸಂಜೆ) ಕ್ಷಿತಿಜದ ಕೆಳಗಿರುವಾಗ ಆಕಾಶದಲ್ಲಿ ಕಂಡುಬರುವ ಮಬಉ ಬೆಳಕು.
  2. (ಸಾಮಾನ್ಯವಾಗಿ) ಸಂಜೆ; ಸಂಧ್ಯಾಕಾಲ; ಮಬ್ಬಿನ ಸಮಯ; ನಸು ಬೆಳಕಿನ ಕಾಲ.
  3. ನಸು ಬೆಳಕು; ಮಂದಪ್ರಕಾಶ.
  4. ಅರೆಯರಿವು; ಅಪೂರ್ಣ ಜ್ಞಾನ; ಅರೆ ತಿಳಿವಳಿಕೆ.
  5. ಅವನತಿ ಕಾಲ ಯಾ ವಿನಾಶ ಕಾಲ.
ಪದಗುಚ್ಛ
  1. twilight arc (or arch or curve) ಸಂಧ್ಯಾಚಾಪ; ಸೂರ್ಯಾಸ್ತ ಕಾಲದಲ್ಲಿ ಪೂರ್ವದಿಕ್ಕಿನ ಕ್ಷಿತಿಜದಲ್ಲಿ ಕಾಣುವ ಗಾಢ ನೀಲ ಛಾಯಾ ಪ್ರದೇಶದ ಎಲ್ಲೆಯಾದ ಪಾಟಲವರ್ಣದ ಪಟ್ಟೆ.
  2. twilight of the gods (ಸ್ಕ್ಯಾಂಡಿನೇವಿಯದ ಪುರಾಣ) (ಪರಸ್ಪರ ನಾಶದಲ್ಲಿ ಪರ್ಯವಸಾನವಾದ) ದೇವಾಸುರ ಯುದ್ಧ.