See also 2twang
1twang ಟ್ವಾಂಗ್‍
ಸಕರ್ಮಕ ಕ್ರಿಯಾಪದ
  1. (ಮೀಟಿದ ತಂತಿ, ವಾದ್ಯ, ಯಾ ಬಿಲ್ಲಿನ ಹೆದೆಯಂತೆ) ಟಂಕಾರ, ಠೇಂಕಾರ–ಮಾಡು ( ಅಕರ್ಮಕ ಕ್ರಿಯಾಪದ ಸಹ).
  2. (ಹೀನಾರ್ಥಕ ಪ್ರಯೋಗ) (ಪಿಟೀಲು ಮೊದಲಾದವನ್ನು) ಟೊಂಯ್‍ಗುಟ್ಟಿಸು; ಟೊಂಯ್‍ಟೊಂಯ್‍ ಎಂದು ಬಾರಿಸು.
  3. ಗೊಂಯ್‍ಗೊಂಯ್‍ ಎಂದು ಮಾತನಾಡು; ಮೂಗಿನಲ್ಲಿ ಮಾತನಾಡು; ಅನುನಾಸಿಕೋಚ್ಚಾರದಿಂದ ಮಾತನಾಡು.
See also 1twang
2twang ಟ್ವಾಂಗ್‍
ನಾಮವಾಚಕ
  1. (ಬಿಗಿಯಾದ ತಂತಿ, ಬಿಲ್ಲು ಹೆದೆ, ಮೊದಲಾದವುಗಳ) ಟಂಕಾರ(ಧ್ವನಿ); ಠೇಂಕಾರ.
  2. ಅನುನಾಸಿಕೋಚ್ಚಾರ; ಮೂಗಿನಲ್ಲಿ ಮಾತಾಡುವುದು.