turret ಟರಿಟ್‍
ನಾಮವಾಚಕ
  1. ಸಣ್ಣ ಗೋಪುರ; ಮುಖ್ಯ ಕಟ್ಟಡಕ್ಕೆ ಸೇರಿದ್ದು, ನೆಲದಿಂದ ಮೇಲಕ್ಕೆ ಏಳುವ ಯಾ ಮುಖ್ಯ ಕಟ್ಟಡದ ಗೋಡೆಯಿಂದ ಯಾ ಬೋದಿಗೆಯಿಂದ ಹೊರಚಾಚಿದಂತಿರುವ, ಗೋಪುರ. Figure: turret
  2. ತಿರುಗು ಬಉರುಜು; ಭ್ರಮಣ ಗೋಪುರ; ಹಡಗು, ವಿಮಾನ, ಕೋಟೆ ಯಾ ಶಸ್ತ್ರಸಜ್ಜಿತ ಟ್ಯಾಂಕ್‍, ಮೊದಲಾದವುಗಳಲ್ಲಿ ಫಿರಂಗಿಗಳು, ಫಿರಂಗಿಯವರು ಇರಲು ಮಾಡಿರುವ, ಎತ್ತರವಿಲ್ಲದ ತಿರುಗು ಗೋಪುರ.
  3. (ತಿರುಗು ಚರಕಿಯಂತ್ರ ಮೊದಲಾದವುಗಳಲ್ಲಿ ಸಲಕರಣೆಗಳನ್ನು ಹಿಡಿದುಕೊಳ್ಳುವ) ಹತ್ಯಾರುಹಿಡಿಕೆ.
ಪದಗುಚ್ಛ

turret lathe (ಯಂತ್ರಶಾಸ್ತ್ರ) ತಿರುಗು ಚರಕಿ; ನಾನಾ ರೀತಿಯ ಅಚ್ಚು ಕೆತ್ತುವ, ಮತ್ತು ಕಡೆತದ, ಹತ್ಯಾರುಗಳನ್ನುಳ್ಳ ಚರಕಿಯಂತ್ರ (= capstan lathe)