turning ಟರ್ನಿಂಗ್‍
ನಾಮವಾಚಕ
  1. ಕಡೆತ; ಚರಕಿ ಬಳಸುವುದು.
  2. (ಬಹುವಚನದಲ್ಲಿ) ಚರಕಿಯಿಂದ ಕಡೆಯುವಾಗ ಉದುರುವ ಸುರುಳಿ ಚೂರುಗಳು.
  3. ರಸ್ತೆಯ ತಿರುವು, ಕವಲು; ಒಂದು ರಸ್ತೆ ಇನ್ನೊಂದರಿಂದ ಕವಲೊಡೆಯುವ ಸ್ಥಳ: stop at the next turning ಮುಂದಿನ ಕವಲು ರಸ್ತೆಯ ಬಳಿ ನಿಲ್ಲು.
  4. ತಿರುವು, ಅಡ್ಡ–ರಸ್ತೆ; ಇನ್ನೊಂದು ರಸ್ತೆಯಿಂದ ತಿರುಗಿದ, ಕವಲೊಡೆದ ರಸ್ತೆ.