turkey ಟರ್ಕಿ
ನಾಮವಾಚಕ
(ಬಹುವಚನ turkeys).
  1. ಸಾಕಿದ ಟರ್ಕಿ ಕೋಳಿ; ಆಹಾರಕ್ಕೆ ಯೋಗ್ಯವಾದ, ಕ್ರಿಸ್‍ಮಸ್‍ ಮೊದಲಾದ ಹಬ್ಬಗಳಲ್ಲಿ ವಿಶೇಷವಾಗಿ ಬಳಸುವ, ಮೂಲತಃ ಅಮೆರಿಕದ, ಹಸುರು ಯಾ ತಾಮ್ರ ಬಣ್ಣದ ಹೊಳಪುಳ್ಳ ಕಪ್ಪುಗರಿಗಳಿರುವ, ಮೇಲಿಯಾಗ್ರಿಸ್‍ ಗ್ಯಾಲಪಾವೋ ಕುಲದ, ಮುಖ್ಯವಾಗಿ ಸಾಕಿದ, ಕುಕ್ಕುಟ ಜಾತಿಯ ದೊಡ್ಡ ಬೇಟೆಹಕ್ಕಿ.Figure: turkey
  2. (ಆಹಾರವಾಗಿ) ಟರ್ಕಿಕೋಳಿ ಮಾಂಸ.
  3. (ಅಮೆರಿಕನ್‍ ಪ್ರಯೋಗ) (ಅಶಿಷ್ಟ)
    1. (ನಾಟಕದ) ಅಪಯಶಸ್ಸು; ಸೋಲು.
    2. ಮೂರ್ಖ; ದಡ್ಡ(ವ್ಯಕ್ತಿ).
ಪದಗುಚ್ಛ
  1. red as a turkey cock (ಕೋಪ ಮೊದಲಾದವುಗಳಿಂದ ಕೇಂಪೇರಿದವನ ವಿಷಯದಲ್ಲಿ) ಉಗ್ರಕೋಪದಿಂದ ಕೆಂಪಾಗಿ, ಕೆಂಡವಾಗಿ.
  2. talk turkey (ಅಮೆರಿಕನ್‍ ಪ್ರಯೋಗ, ಆಡುಮಾತು) ನೇರವಾಗಿ, ಮುಚ್ಚುಮರೆಯಿಲ್ಲದೆ ಮಾತನಾಡು; ನೇರವಾಗಿ ವಿಷಯಕ್ಕೆ ಬರು.