tumbler ಟಂಬ್ಲರ್‍
ನಾಮವಾಚಕ
  1. ದೊಂಬರವನು; ಡೊಂಬರಾಟದವನು; ಕಸರತ್ತು ಮಾಡುವವನು, ಮುಖ್ಯವಾಗಿ ಲಾಗ ಹಾಕುವವನು.
  2. ದೊಂಬ ಪಾರಿವಾಳ; ಹಾರುವಾಗ ಹಿಂದಕ್ಕೆ ಲಾಗಹಾಕುವ ಪಾರಿವಾಳ.
  3. ಟಂಬ್ಲರು:
    1. ಹಿಡಿ ಯಾ ಪಾದ ಇರದ (ನೆಟ್ಟಗೆ ನಿಲ್ಲದಂತೆ ದುಂಡು ಅಡಿಯಿರುತ್ತಿದ್ದ) ಗಾಜಿನ, (ಕುಡಿಯುವ) ಲೋಟ.
    2. ಕೀಲಿಕೈಯಿಂದ ಎತ್ತುವವರೆಗೂ ಅಗುಳಿಯನ್ನು ಹಿಡಿದಿಟ್ಟುಕೊಂಡಿರುವ, ಬೀಗದೊಳಗಿನ ತಿರುಗುಗೂಟ, ಅಚ್ಚು(ಗೂಟ).
    3. ಬಂದೂಕಿನ ಚಾಪಿನಲ್ಲಿರುವ ತಿರುಗುಗೂಟದ ತಟ್ಟೆ.
    4. (ಸಣ್ಣ ಸ್ಪ್ರಿಂಗ್‍ ಮೀಟುಗೋಲನ್ನು ಒತ್ತಿ ಚಾಲೂ ಮಾಡುವ) ವಿದ್ಯುತ್‍ ಸ್ವಿಚ್ಚು.
    5. ತೂಗುಗೊಂಬೆ; ಮುಟ್ಟಿದರೆ ತೂಗಾಡುವ ಗೊಂಬೆ.
    6. = tumbling-barrel.
    7. (ಬಟ್ಟೆ ಒಣಗಿಸುವ ಯಂತ್ರದ) ಕಾದ ಉರುಳು ಪೆಟ್ಟಿಗೆ ಯಾ ಪೀಪಾಯಿಯಂಥ ಭಾಗ.