See also 2tumble
1tumble ಟಂಬ್‍ಲ್‍
ಸಕರ್ಮಕ ಕ್ರಿಯಾಪದ
  1. (ಇದ್ದಕ್ಕಿದ್ದಂತೆ, ಎಡವುತ್ತಾ ಯಾ ತಲೆಮುಂದಾಗಿ) ಉರುಳಿಸು; ಬೀಳಿಸು; ಕೆಡವು ( ಅಕರ್ಮಕ ಕ್ರಿಯಾಪದ ಸಹ).
  2. (ಬಟ್ಟೆ, ಕೂದಲು, ಮೊದಲಾದವನ್ನು) ಹುಚ್ಚುಹುಚ್ಚಾಗಿ ಎಳೆದಾಡು; ಕೆದರಿಹಾಕು; ಅಸ್ತವ್ಯಸ್ತಗೊಳಿಸು.
    1. ಅನಾಮತ್ತಾಗಿ–ಕೆಡವು, ತಲೆಕೆಳಕಾಗಿ ಬೀಳುವಂತೆ ಮಾಡು, ಎಸೆ.
    2. ಎಸೆದಾಡು; ಸಿಕ್ಕಾಬಟ್ಟೆ ತಳ್ಳು, ನೂಕು.
  3. (ಬಟ್ಟೆ ಒಣಗಿಸುವ ಉರುಳುಯಂತ್ರದಲ್ಲಿ) ಒಣಗಿಸು.
  4. (ಎರಕದ ಸಾಮಾನು, ರತ್ನಗಳು, ಮೊದಲಾದವನ್ನು) ಉರುಳು ಪೀಪಾಯಿಯಲ್ಲಿ ಸುತ್ತಿಸಿ ಸ್ವಚ್ಫಗೊಳಿಸು.
ಅಕರ್ಮಕ ಕ್ರಿಯಾಪದ
  1. (ತಟ್ಟನೆ, ರಭಸದಿಂದ, ಮುಖ್ಯವಾಗಿ ನಿಸ್ಸಹಾಯಕವಾಗಿ) ಬೀಳು; ಉರುಳು; ಮುಗ್ಗರಿಸು; ಎಡವು.
  2. (ಅಲೆಗಳು, ರೋಗಿ, ಮೊದಲಾದವುಗಳ ವಿಷಯದಲ್ಲಿ) ಹೊರಳಾಡು; ಹೊಯ್ದಾಡು; ಉರುಳಾಡು.
  3. ಏಳುತ್ತ, ಬೀಳುತ್ತ, ಮುಗ್ಗರಿಸುತ್ತಾ–ನಡೆ, ಹೋಗು, ಓಡು: tumbled up the stairs ಏಳುತ್ತ ಬೀಳುತ್ತ ಮಹಡಿ ಮೆಟ್ಟಿಲು ಏರಿದ.
  4. (ಬೆಲೆ, ಮೊತ್ತ, ಮೊದಲಾದವುಗಳು) ವೇಗವಾಗಿ–ಬೀಳು, ಇಳಿದುಹೋಗು.
  5. (ಪಾರಿವಾಳದ ವಿಷಯದಲ್ಲಿ) ಹಾರುತ್ತಿರುವಾಗ ಹಿಂದಕ್ಕೆ ವೇಗವಾಗಿ ಲಾಗಹಾಕು, ಪಲ್ಟಿ ಹೊಡಿ.
  6. (ದೊಂಬರಾಟದಲ್ಲಿ) ಲಾಗ ಹಾಕು; ಪಲ್ಟಿ ಹೊಡಿ.
ಪದಗುಚ್ಛ
  1. tumble home (ಹಡಗಿನ ಪಕ್ಕಗಳ ವಿಷಯದಲ್ಲಿ) ಒಳಬಾಗಿರು; ಒಳಓರೆಯಾಗಿರು.
  2. tumble in = ಪದಗುಚ್ಛ 1.
  3. tumble to (ಆಡುಮಾತು) (ರಹಸ್ಯ, ಭಾವ, ಮೊದಲಾದವನ್ನು) ತಟ್ಟನೆ–ಹಿಡಿ, ಗ್ರಹಿಸು: at last he tumbled to what I had been hinting at ನಾನು ಏನು ಹೇಳಲು ಸೂಚಿಸುತ್ತಿದ್ದೇನೆಂದು ಕಟ್ಟ ಕಡೆಯಲ್ಲಿ ಅವನು ಗ್ರಹಿಸಿದ.
See also 1tumble
2tumble ಟಂಬ್‍(ಬ)ಲ್‍
ನಾಮವಾಚಕ
  1. ಬೀಳು; ಉರುಳು: had a nasty tumble ಪೆಟ್ಟಾಗುವಂತೆ ಉರುಳಿದ.
  2. ಲಾಗ; ಪಲ್ಟಿ.
  3. ಅಸ್ತವ್ಯಸ್ತತೆ; ಅವ್ಯವಸ್ಥೆ; ಚೆಲ್ಲಾಪಿಲ್ಲಿ: things were all in a tumble ಎಲ್ಲವೂ ಅಸ್ತವ್ಯಸ್ತ ಸ್ಥಿತಿಯಲ್ಲಿದ್ದವು.