See also 2tube
1tube ಟ್ಯೂಬ್‍
ನಾಮವಾಚಕ
  1. (ಗಾಳಿ, ದ್ರವಗಳು, ಮೊದಲಾದವನ್ನು ಹಿಡಿದಿಟ್ಟುಕೊಳ್ಳಲು ಯಾ ಒಯ್ಯಲು ಬಳಸುವ) ಕೊಳವೆ; ನಳಿಕೆ; ನಾಳ.
  2. ಟ್ಯೂಬಉ; (ಬಣ್ಣ, ಅಂಟು, ಮೊದಲಾದ ಅರೆದ್ರವ ಪದಾರ್ಥವನ್ನು ಹಿಡಿದಿಟ್ಟುಕೊಳ್ಳುವ, ಒಂದು ಕಡೆ ಮುಚ್ಚಿದ ಇನ್ನೊಂದು ಕಡೆ ತಿರುಪುಮುಚ್ಚಳವಿರುವ, ಮೆತುಲೋಹದ ಯಾ ಪ್ಲಾಸ್ಟಿಕ್ಕಿನ) ಮುಚ್ಚುಕೊಳವೆ: a tube of toothpaste ಟೂತ್‍ಪೇಸ್ಟಿನ ಕೊಳವೆ.
  3. ಗಾಳಿವಾದ್ಯದ ಕೊಳವೆ.
  4. (ಅಂಗರಚನಾಶಾಸ್ತ್ರಮತ್ತು ಪ್ರಾಣಿವಿಜ್ಞಾನ) ನಾಳ; ನಳಿಕೆ; ದೇಹದಲ್ಲಿನ ಉರುಳೆಯಾಕಾರದ ನಾಳ ಯಾ ಟೊಳ್ಳು ಅಂಗ: bronchial tubes ಶ್ವಾಸ ನಾಳಗಳು. Fallopian tubes ಅಂಡನಾಳಗಳು ಯಾ ಡಿಂಬನಾಳಗಳು.
  5. = inner tube.
    1. (ಮುಖ್ಯವಾಗಿ ದೂರದರ್ಶನದ) ಕ್ಯಾಥೋಡ್‍ ಕಿರಣದ ನಳಿಕೆ.
    2. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) (ಆಡುಮಾತು) ದೂರದರ್ಶಕ; ಟೆಲಿವಿಷನ್‍.
  6. ಸುಷಿರ ವಾದ್ಯದ ಉರುಳೆಯಾಕಾರದ ಭಾಗ.
  7. (ಆಡುಮಾತು)
    1. (ಲಂಡನ್‍ ಮೊದಲಾದವುಗಳಲ್ಲಿನ, ಭೂಗತ ವಿದ್ಯುತ್‍ ರೈಲ್ವೆಯ) ಸುರಂಗಮಾರ್ಗ.
    2. ವಿದ್ಯುತ್‍ ಸುರಂಗ–ರೈಲು, ರೈಲ್ವೆವ್ಯವಸ್ಥೆ: went by tube ಸುರಂಗ ರೈಲಿನಲ್ಲಿ ಹೋದ.
  8. (ಅಮೆರಿಕನ್‍ ಪ್ರಯೋಗ) = thermionic valve.
  9. (ಆಸ್ಟ್ರೇಲಿಯ) (ಅಶಿಷ್ಟ) ಒಂದು ಡಬ್ಬ ಬಿಯರು (ಮದ್ಯ).
ಪದಗುಚ್ಛ

the tube = tube(6b).

See also 1tube
2tube ಟ್ಯೂಬ್‍
ಸಕರ್ಮಕ ಕ್ರಿಯಾಪದ
  1. ನಾಳ ಯಾ ಕೊಳವೆ ಒದಗಿಸು.
  2. ನಾಳ ಯಾ ಕೊಳವೆಯೊಳಕ್ಕೆ ತುಂಬಉ; ನಾಳದೊಳಗೆ ಇಡು.
ಪದಗುಚ್ಛ

tubed horse ಕೊಳವೆ ಅಳವಡಿಸಿದ ಕುದುರೆ; ಸುಲಭವಾಗಿ ಉಸಿರಾಡಲು ಶ್ವಾಸಕೋಶದಲ್ಲಿ ಕೊಳವೆ ಅಳವಡಿಸಿರುವ ಕುದುರೆ.