trustee ಟ್ರಸ್ಟೀ
ನಾಮವಾಚಕ
  1. (ನ್ಯಾಯಶಾಸ್ತ್ರ) ಟ್ರಸ್ಟಿ; ನ್ಯಾಸದರ್ಶಿ; ನ್ಯಾಸಧಾರಿ; ವಿಶ್ವಸ್ಥ; ಧರ್ಮದರ್ಶಿ; ನಿರ್ದಿಷ್ಟ ಉದ್ದೇಶಗಳಿಗೆ ಮಾತ್ರ ಬಳಸಬಹುದೆಂಬ ನಿಬಂಧನೆಗೆ ಒಳಪಟ್ಟು, ನ್ಯಾಸವಾಗಿಟ್ಟ ಆಸ್ತಿಯ ನಿರ್ವಹಣೆಯ ಅಧಿಕಾರವನ್ನು ವಹಿಸಿಕೊಟ್ಟಿರುವ ವ್ಯಕ್ತಿ ಯಾ ನ್ಯಾಯದರ್ಶಿ ಮಂಡಲಿಯ ಸದಸ್ಯ.
  2. (ಸಂಸ್ಥೆ ಮೊದಲಾದವುಗಳ ಸಾಮಾನ್ಯವಾಗಿ ಚುನಾಯಿತ) ಆಡಳಿತ ಸಮಿತಿ ಸದಸ್ಯ.
  3. ನ್ಯಾಸಧಾರಿ; ಒಂದು ಪ್ರದೇಶದ ಆಡಳಿತ ಜವಾಬ್ದಾರಿ ವಹಿಸಿಕೊಳ್ಳುವ ರಾಜ್ಯ, ರಾಷ್ಟ್ರ, ದೇಶ.
  4. ನ್ಯಾಸನಿರ್ವಾಹಕ; ನಿರ್ವಾಹಕ ನ್ಯಾಯದರ್ಶಿ, ಆಡಳಿತಗಾರ.
ಪದಗುಚ್ಛ

the Public Trustee (ಬ್ರಿಟಿಷ್‍ ಪ್ರಯೋಗ) ನ್ಯಾಸಾಧಿಕಾರಿ; ನ್ಯಾಸ ನಿರ್ವಾಹಕ; ಸರ್ಕಾರವು ಕೋರಿದಾಗ ನ್ಯಾಸ ಸಂಸ್ಥೆ, ಉಯಿಲು, ಮೊದಲಾದವನ್ನು ನಿರ್ವಹಿಸುವ ಅಧಿಕಾರಿ.