See also 2trump  3trump
1trump ಟ್ರಂಪ್‍
ನಾಮವಾಚಕ

(ಪ್ರಾಚೀನ ಪ್ರಯೋಗ ಯಾ ಕಾವ್ಯಪ್ರಯೋಗ) ಕಹಳೆ; ಕಹಳೆಯ ಧ್ವನಿ, ಮೊಳಗು: trump of doom ಪ್ರಳಯಕಾಲದ ಮಹಾ ವಿಚಾರಣೆಯ ದಿನದ ಕಹಳೆ(ಯ ಧ್ವನಿ).

ಪದಗುಚ್ಛ

the last trump ಮಹಾವಿಚಾರಣೆಯ ದಿನ ಸತ್ತವರನ್ನು ಏಳಿಸಲು ಊದುವ ಕಹಳೆ, ಕಹಳೆಯ ಮೊಳಗು.

See also 1trump  3trump
2trump ಟ್ರಂಪ್‍
ನಾಮವಾಚಕ
  1. (ಇಸ್ಪೀಟಾಟ) ತುರುಫು; ತುರುಹೆಲೆ; ಇತರ ಎಲೆಗಳಿಗಿಂತ ಮೇಲಿನ ವರ್ಗಕ್ಕೆ ಸೇರಿದ ಯಾವುದೇ ರಂಗಿನ ಎಲೆ.
  2. (ಮುಖ್ಯವಾಗಿ ಆಶ್ಚರ್ಯ ಹುಟ್ಟಿಸುವ) ಅನುಕೂಲ; ಅದೃಷ್ಟ; ಲಾಭ.
  3. (ಆಡುಮಾತು)
    1. ಸಹಾಯ ಮಾಡುವ ಯಾ ಮೆಚ್ಚಿಗೆಗೆ ಪಾತ್ರನಾದ ವ್ಯಕ್ತಿ.
    2. (ಆಸ್ಟ್ರೇಲಿಯ ಮತ್ತು ನ್ಯೂಸಿಲೆಂಡ್‍) ಅಧಿಕಾರಸ್ಥ; ಅಧಿಕಾರ ಸ್ಥಾನದಲ್ಲಿರುವ ವ್ಯಕ್ತಿ.
    3. ಅತ್ಯುತ್ಕೃಷ್ಟ ವ್ಯಕ್ತಿ; ಭರ್ಜರಿ ಆಸಾಮಿ.
ಪದಗುಚ್ಛ
  1. a call for trumps (ಜೊತೆಯಾಟಗಾರನಿಗೆ) ತುರುಫು ಇಳಿಯುವಂತೆ ಸೂಚನೆ, ಸಂಕೇತ.
  2. play a trump ಅನಿರೀಕ್ಷಿತ ಕಾರ್ಯಾಚರಣೆಯ ಮೂಲಕ ಲಾಭಪಡೆದುಕೊ, ಪ್ರಯೋಜನ ಗಳಿಸು.
  3. turn up trumps (ಬ್ರಿಟಿಷ್‍ ಪ್ರಯೋಗ) (ಆಡುಮಾತು)
    1. ಅದೃಷ್ಟ ಖುಲಾಯಿಸು; ನಿರೀಕ್ಷಿಸಿದ್ದಕ್ಕಿಂತ– ಚೆನ್ನಾಗು, ಉತ್ತಮವಾಗು.
    2. ಬಹಳ ಯಶಸ್ವಿಯಾಗು.
    3. ಬಹಳ ಸಹಾಯಕವಾಗು.
See also 1trump  2trump
3trump ಟ್ರಂಪ್‍
ಸಕರ್ಮಕ ಕ್ರಿಯಾಪದ
  1. ತುರುಪು(ಎಲೆ) ಇಳಿದು ಪಟ್ಟು ಗೆದ್ದುಕೊ; ಎದುರಾಳಿಯನ್ನು ಸೋಲಿಸು.
  2. (ಆಡುಮಾತು) (ಒಬ್ಬ ವ್ಯಕ್ತಿ, ಪ್ರಸ್ತಾಪ, ಮೊದಲಾದವುಗಳ ವಿಷಯದಲ್ಲಿ) ಅನಿರೀಕ್ಷಿತ ಪ್ರಯೋಜನ, ಲಾಭ–ಪಡೆ(ದುಕೊ).
ಅಕರ್ಮಕ ಕ್ರಿಯಾಪದ

ಉಳಿದವರು ಬೇರೊಂದು ರಂಗು ಇಳಿದಾಗ ತುರುಹು ಇಳಿ; ತುರುಹಾಡು; ತುರುಹಿನಿಂದ ಹೊಡೆ.

ಪದಗುಚ್ಛ

trump up (ಆಪಾದನೆ, ನೆಪ, ಸುಳ್ಳುಕಥೆ, ಮೊದಲಾದವನ್ನು) ಕಲ್ಪನೆ, ಸೃಷ್ಟನೆ ಮಾಡು: on a trumped-up charge ಸೃಷ್ಟನೆ ಮಾಡಿದ ಆಪಾದನೆಯ, ಆರೋಪದ ಮೇಲೆ.