truce ಟ್ರೂಸ್‍
ನಾಮವಾಚಕ
  1. ಯುದ್ಧ, ಕದನ–ವಿರಾಮ; ತಾತ್ಕಾಲಿಕ ಸಂಧಿ; ಯುದ್ಧದ ತಾತ್ಕಾಲಿಕ ನಿಲುಗಡೆ.
  2. (ನೋವು, ಕೆಲಸ, ಮೊದಲಾದವುಗಳಿಂದ) ಬಿಡುವು; ವಿರಾಮ; ವಿಶ್ರಾಂತಿ.
  3. ಖಾಸಗಿ ಜಗಳ ಯಾ ವೈರದ ತಾತ್ಕಾಲಿಕ ನಿಲುಗಡೆ, ವಿರಾಮ.
ಪದಗುಚ್ಛ
  1. a truce to (ಪ್ರಾಚೀನ ಪ್ರಯೋಗ) ಸಾಕು; ನಿಲ್ಲಲಿ; ಕೊನೆಗೊಳ್ಳಲಿ(ಸಂಭಾಷಣೆಯಲ್ಲಿ ಭಾವಸೂಚಕ ಅವ್ಯಯವಾಗಿ ಪ್ರಯೋಗ): a truce to this light conversation ಈ ಹಗುರ ಸಂಭಾಷಣೆ ಸಾಕು!
  2. truce of God (ಚರಿತ್ರೆ) ಪವಿತ್ರ ವಿಶ್ರಾಂತಿ ಯಾ ವಿರಾಮ; ಕೆಲವು ಧಾರ್ಮಿಕ ಹಬ್ಬ ಮೊದಲಾದ ಸಂದರ್ಭದಲ್ಲಿ ಯುದ್ಧ ಯಾ ಕಲಹಗಳನ್ನು ನಿಲ್ಲಿಸುವುದು.