trough ಟ್ರಾಹ್‍
ನಾಮವಾಚಕ
  1. ತೊಟ್ಟಿ; ಬಾನೆ; ದೋಣಿ; ಹಿಟ್ಟು ನಾದುವುದು, ಅದುರು ತೊಳೆಯುವುದು, ದನಕರುಗಳಿಗೆ ತಿಂಡಿ ನೀರು ಹಾಕುವುದು, ಮೊದಲಾದವಕ್ಕೆ ಬಳಸುವ ಮರದ ಯಾ ಕಲ್ಲಿನ ಉದ್ದನೆಯ ಪಾತ್ರೆ.
  2. ನೀರು, ದ್ರವ ಹಾಯಿಸುವ ಮರದ ದೋಣಿ, ನಾಲೆ.
  3. (ಪವನಶಾಸ್ತ್ರ) ಕನಿಷ್ಠ ವಾಯುಭಾರಪ್ರದೇಶ; (ಎರಡು ಹೆಚ್ಚು ವಾಯುಭಾರದ ಪ್ರದೇಶಗಳ ನಡುವಣ) ಅತ್ಯಂತ ಕಡಿಮೆ ಒತ್ತಡದ ಪ್ರದೇಶ ಯಾ ರೇಖೆ.
  4. ಅಲೆಯ ಎರಡು ಶೃಂಗಗಳ ನಡುವಣ ತಗ್ಗು; ಅಲೆಕುಳಿ.
  5. ವಾಯುಭಾರ ಕಡಮೆಯಿರುವ ಉದ್ದನೆಯ ಭೂಪಟ್ಟೆ, ಪ್ರದೇಶ.
  6. ಮಂದಿಕಾಲ; ಆರ್ಥಿಕ ವಹಿವಾಟು ಮೊದಲಾದವು ಅತ್ಯಂತ ಕಡಮೆಯಾಗಿರುವ ಅವಧಿ.
  7. ಗರ್ತ; ಕುಳಿ; ಯಾವುದೇ ತಗ್ಗು.
  8. ಕನಿಷ್ಠಪಾತ ರೇಖೆ; ಯಾವುದೇ ಪರಿಮಾಣ ವ್ಯತ್ಯಾಸವಾಗುತ್ತಿರುವುದನ್ನು ಸೂಚಿಸುವ ವಕ್ರದಲ್ಲಿನ ಕನಿಷ್ಠ ಪಾತ ಭಾಗ.