trophy ಟ್ರೋಹಿ
ನಾಮವಾಚಕ
(ಬಹುವಚನ trophies).
  1. ಪಾರಿತೋಷಿಕ; ಬಹುಮಾನ; (ಸ್ಪರ್ಧೆ ಮೊದಲಾದವುಗಳಲ್ಲಿ) ಜಯ ಗಳಿಸಿದ್ದಕ್ಕೆ ಬಹುಮಾನವಾಗಿ ಯಾ ಸ್ಮಾರಕವಾಗಿ ಕೊಡುವ ಬಟ್ಟಲು ಯಾ ಇತರ ಅಲಂಕಾರದ ವಸ್ತು.
  2. (ಗೋಡೆ ಮೊದಲಾದವುಗಳ ಮೇಲೆ ಅಲಂಕಾರವಾಗಿ ಜೋಡಿಸಿದ) ಸಾಂಕೇತಿಕ ಯಾ ಮಾದರಿ ವಸ್ತುಗಳ ತಂಡ (ಸಾಮಾನ್ಯವಾಗಿ ಯುದ್ಧಾಯುಧಗಳು ಯಾ ಅವುಗಳ ಚಿತ್ರ).
  3. (ಗ್ರೀಕ್‍ ಮತ್ತು ರೋಮನ್‍ ಪ್ರಾಕ್ತನಶಾಸ್ತ್ರ) ವಿಜಯದ ಸೂರೆ; (ವಿ)ಜಯ ಸ್ಮಾರಕ:
    1. ವಿಜಯದ ಸ್ಮಾರಕವಾಗಿ ಯುದ್ಧರಂಗದಲ್ಲಾಗಲಿ, ಬೇರೆ ಸ್ಥಳದಲ್ಲಾಗಲಿ ಕಂಬಕ್ಕೆ ಯಾ ಮರಕ್ಕೆ ತೂಗಹಾಕಿ ಪ್ರದರ್ಶಿಸಿದ, ಸೋತ ಶತ್ರುವಿನ ಆಯುಧಗಳು ಮೊದಲಾದವು.
    2. (ಇದೇ ರೀತಿಯಲ್ಲಿ, ಆದರೆ ಇನ್ನೂ ಶಾಶ್ವತ ರೂಪದಲ್ಲಿ ರೋಮನರು ನಿರ್ಮಿಸುತ್ತಿದ್ದ) ಜಯಸ್ಮಾರಕ; ವಿಜಯ–ಗೋಪುರ, ಸ್ತಂಭ.
  4. ಬೇಟೆಯಲ್ಲಿ ಪಡೆದ ಸ್ಮಾರಕ ಯಾ ನೆನಪಿನ ಗುರುತಿಗೆ ಇಟ್ಟುಕೊಂಡ ವಸ್ತು, ಉದಾಹರಣೆಗೆ ಜಿಂಕೆಕೊಂಬಉಗಳು.