See also 2triumph
1triumph ಟ್ರೈಅಮ್‍ಹ್‍
ನಾಮವಾಚಕ
    1. (ವಿ)ಜಯ; ಗೆವು: returned home in triumph ವಿಜಯಿಯಾಗಿ ಊರಿಗೆ ಹಿಂತಿರುಗಿದ.
    2. ಮಹಾ ಸಾಧನೆ: the triumphs of science ವಿಜ್ಞಾನದ ಮಹಾಸಾಧನೆಗಳು.
  1. ವಿಜಯೋತ್ಸಾಹ; (ವಿ)ಜಯಾನಂದ; ವಿಜಯ ಸಂಭ್ರಮ; ಹರ್ಷೋತ್ಕರ್ಷ; ಹೆಕ್ಕಳಿಕೆ: great was his triumph on hearing this ಇದನ್ನು ಕೇಳಿ ಅವನ ವಿಜಯೋತ್ಸಾಹ ಎಲ್ಲೆ ಮೀರಿತು. could see triumph in her face ಅವಳ ಮುಖದಲ್ಲಿ ಹರ್ಷೋತ್ಕರ್ಷ ಕಾಬಹುದಾಗಿತ್ತು.
  2. (ರೋಮನ್‍ ಪ್ರಾಚೀನ ಚರಿತ್ರೆ) ಗೆಲವೊಸಗೆ; ವಿಜಯೋತ್ಸವ; ವಿಜಯದ ಮತ್ತು ವಿಜೇತ ನಾಯಕನ ಸಲುವಾಗಿ ನಡೆಯುವ ಮೆರವಣಿಗೆ ಮತ್ತು ಉತ್ಸವ.
  3. ಮಾದರಿ; ಆದರ್ಶ; ಶ್ರೇಷ್ಠ ನಿದರ್ಶನ; ಉತ್ಕೃಷ್ಟ ಉದಾಹರಣೆ; ಅತ್ಯುತ್ತಮ ದೃಷ್ಟಾಂತ: a triumph of engineering ಇಂಜಿನಿಯರಿಂಗ್‍ನ ಶ್ರೇಷ್ಠ ನಿದರ್ಶನ.
See also 1triumph
2triumph ಟ್ರೈಅಮ್‍ಹ್‍
ಅಕರ್ಮಕ ಕ್ರಿಯಾಪದ
  1. ಜಯಪಡೆ; ವಿಜಯಿಯಾಗು; ಗೆಲ್ಲು; ಜಯಿಸು: triumph over obstacles ಅಡ್ಡಿಅಡಚಣೆಗಳನ್ನು ಗೆಲ್ಲು.
  2. (ರೋಮನ್‍ ಪ್ರಾಚೀನ ಚರಿತ್ರೆ) ವಿಜಯೋತ್ಸವ–ಹೊರಡು, ನಡೆಸು.
  3. ಹೆಕ್ಕಳಿಸು; ವಿಂಭಿಸು; ಬೀಗು; ಅಹಂಕಾರ ಪಡು.