triptych ಟ್ರಿಪ್ಟಿಕ್‍
ನಾಮವಾಚಕ
  1. ಮೂರಂಕಣ ಚಿತ್ರ ಯಾ ಕೆತ್ತನೆ; ಸಾಮಾನ್ಯವಾಗಿ ಕೀಲು ಹಾಕಿ ಲಂಬವಾಗಿ ಒಟ್ಟಿಗೆ ಸೇರಿಸಿದ, ಕೆಲವೊಮ್ಮೆ ಚರ್ಚಿನ ಬಲಿಪೀಠದ ಮೇಲುಗಡೆ ಯಾ ಹಿಂಭಾಗದಲ್ಲಿ ಸ್ಥಾಪಿಸಿದ, ಮೂರು ಫಲಕಗಳ ಮೇಲೆ ರಚಿಸಿದ ಚಿತ್ರ ಯಾ ಉಬಉಕೆತ್ತನೆ.
  2. ಚಿತ್ರತ್ರಯ; ತ್ರಿಚಿತ್ರ; ಪಕ್ಕಪಕ್ಕದಲ್ಲಿಟ್ಟ ಪರಸ್ಪರ ಸಂಬಂಧವುಳ್ಳ ಮೂರುಚಿತ್ರಗಳು.
  3. ತ್ರಿಫಲಕ; ಕೀಲುಗೂಡಿಸಿದ ಯಾ ಒಟ್ಟಿಗೆ ಸೇರಿಸಿದ, ಮೂರು ಲೇಖನ ಫಲಕಗಳು.
  4. ಮೂರು ಕಲಾಕೃತಿಗಳ ತಂಡ; ಕೃತಿತ್ರಯ.