trillion ಟ್ರಿಲ್ಯನ್‍
ನಾಮವಾಚಕ
(ಬಹುವಚನ ಅದೇ ಯಾ ಮೂರನೇ ಅರ್ಥಕ್ಕೆ trillions).

ತ್ರಿ(ಟ್ರಿ)ಲಿಯ:

  1. (ಅಮೆರಿಕನ್‍ ಪ್ರಯೋಗ) ಹತ್ತುಲಕ್ಷದ ಹತ್ತುಲಕ್ಷ; ಒಂದು ಲಕ್ಷ ಕೋಟಿ (1,000,000,000,000) ಯಾ $10^{ 12}$.
  2. (ಹಿಂದೆ, ಮುಖ್ಯವಾಗಿ ಬ್ರಿಟಿಷ್‍ ಪ್ರಯೋಗ) ಹತ್ತುಲಕ್ಷದ ಹತ್ತುಲಕ್ಷದ ಹತ್ತುಲಕ್ಷ (1,000,000,000,000,000,000 ಯಾ $10^{ 18}$)
  1. (ಬಹುವಚನದಲ್ಲಿ) (ಆಡುಮಾತು) ಬಹಳ ಬಹಳ; ವಿಪರೀತ, ದೊಡ್ಡ, ಭಾರಿ–ಸಂಖ್ಯೆ: trillions of times ಬಹಳ ಬಹಳ ಸಾರಿ.