See also 2trill
1trill ಟ್ರಿಲ್‍
ಸಕರ್ಮಕ ಕ್ರಿಯಾಪದ
  1. (ಸಂಗೀತ) ಅದಿರು ದನಿಯಲ್ಲಿ, ಕಂಪನ ಧ್ವನಿಯಲ್ಲಿ–ಹಾಡು; ದನಿ ನಡುಗಿಸಿ ಹಾಡು; ಪಲಕು ( ಅಕರ್ಮಕ ಕ್ರಿಯಾಪದಸಹ).
  2. ರೇಫವನ್ನು ಯಾ ರಕಾರವನ್ನು ಅದುರು ಯಾ ಕಂಪನ ಧ್ವನಿಯಲ್ಲಿ ಉಚ್ಚರಿಸು.
ಅಕರ್ಮಕ ಕ್ರಿಯಾಪದ

(ವ್ಯಕ್ತಿಯ ಯಾ ವಸ್ತುವಿನ ವಿಷಯದಲ್ಲಿ) ಧ್ವನಿ ಅದಿರಿಸು; ಧ್ವನಿ ಕಂಪಿಸು; ಅದಿರು ಧ್ವನಿ ಕೊಡು: trilling laughter ಅದಿರು ನಗೆ; ಕಂಪಿತಹಸಿತ.

See also 1trill
2trill ಟ್ರಿಲ್‍
ನಾಮವಾಚಕ
  1. ನಡುಗು ಧ್ವನಿ; ಕಂಪ ಧ್ವನಿ; (ಮುಖ್ಯವಾಗಿ ಸಂಗೀತದಲ್ಲಿ ಗಾಯನ ಯಾ ವಾದನದಲ್ಲಿ) ಪಲಕು; ಧ್ವನಿ, ಸ್ವರ–ಕಂಪನ.
  2. ಅದಿರು ದನಿಯಲ್ಲಿ ಉಚ್ಚರಿಸುವ ವ್ಯಂಜನ (ಉದಾಹರಣೆಗೆ ರ).
  3. ಪಕ್ಷಿಯ–ಉಲಿ, ಕೂಜನ.