tricky ಟ್ರಿಕಿ
ಗುಣವಾಚಕ
( ತರರೂಪ trickier, ತಮರೂಪ trickiest).
  1. ತಂತ್ರದ; ಮೋಸದ: a tricky politician ಮೋಸಗಾರ ರಾಜಕಾರಣಿ.
    1. ಜಾರಿಕೊಳ್ಳುವುದರಲ್ಲಿ, ತಪ್ಪಿಸಿಕೊಳ್ಳುವುದರಲ್ಲಿ ಚತುರನಾದ.
    2. ಉಪಾಯ ಕೌಶಲವುಳ್ಳ; ಜಾಣ್ಮೆಯ; ಚಾತುರ್ಯದ; ಕೈಚಳಕದ.
  2. (ಕೆಲಸ ಮೊದಲಾದವುಗಳ ವಿಷಯದಲ್ಲಿ) ಕಷ್ಟವಾದ; ಕ್ಲಿಷ್ಟವಾದ; ಸೂಕ್ಷ್ಮ; ನಾಜೂಕಾದ; ಚಾತುರ್ಯದಿಂದ ವರ್ತಿಸಬೇಕಾದ, ಎಚ್ಚರಿಕೆಯಿಂದ, ಉಪಾಯದಿಂದ–ನಿರ್ವಹಿಸತಕ್ಕ: a tricky problem ಚಾತುರ್ಯದಿಂದ ನಿರ್ವಹಿಸಬೇಕಾದ ಸಮಸ್ಯೆ. a tricky job ನಾಜೂಕಾದ ಕೆಲಸ.