trichotomy ಟ್ರೈಕಾಟಮಿ
ನಾಮವಾಚಕ
(ಬಹುವಚನ trichotomies).

ತ್ರಿವಿಭಜನೆ:

  1. ಮೂರಾಗಿ (ಮುಖ್ಯವಾಗಿ ಸ್ಫುಟವಾಗಿ, ನಿಷ್ಕೃಷ್ಟವಾಗಿ) ವಿಭಾಗಿಸುವುದು.
  2. (ಮುಖ್ಯವಾಗಿ ಮನುಷ್ಯಪ್ರಕೃತಿಯನ್ನು) ದೇಹ, ಆತ್ಮ, ಚೈತನ್ಯ ಎಂದು ಮೂರಾಗಿ ವಿಭಜಿಸುವುದು.