tribute ಟ್ರಿಬಊಟ್‍
ನಾಮವಾಚಕ
  1. (ಚರಿತ್ರೆ) (ಅಧೀನ ರಾಜ್ಯ ಯಾ ಅಧೀನ ರಾಜ ಅಧಿರಾಜ್ಯಕ್ಕೆ ಯಾ ಅಧಿರಾಜನಿಗೆ ಕೊಡುವ) ಕಪ್ಪ(ಕಾಣಿಕೆ); ಪೊಗದಿ.
  2. (ಚರಿತ್ರೆ) ಕಪ್ಪ ಕೊಡಬೇಕಾದ ಸ್ಥಿತಿ; ಅಧೀನತೆ: was laid under tribute ಕಪ್ಪ ಕೊಡಬೇಕಾದ ಸ್ಥಿತಿ ಬಂತು.
  3. ಸನ್ಮಾನ; ಅಭಿನಂದನೆ; ಗೌರವ ಕಾಣಿಕೆ; (ಮರ್ಯಾದೆ, ಪ್ರೀತಿ, ಮೊದಲಾದವನ್ನು ಸೂಚಿಸಲು ಹೇಳಿದ, ಮಾಡಿದ ಯಾ ಕೊಟ್ಟ) ಶ್ಲಾಘನೆ ಮಾತು, ವಸ್ತು ಯಾ ಉಪಚಾರ: paid tribute to his great services ಅವನ ಮಹತ್ತ್ವದ ಸೇವೆಗಾಗಿ ಗೌರವದ ಕಾಣಿಕೆ ಸಲ್ಲಿಸಲಾಯಿತು.
  4. (ಗಣಿ) ಕುಳಪಾಲು; ಗಣಿ ಕೆಲಸದವರಿಗೆ ಅವರ ಕೆಲಸಕ್ಕಾಗಿ ಕೊಡುವ ಅದುರಿನ ಭಾಗ ಯಾ ಅದರ ಬೆಲೆ.
  5. ರಾಜಪಾಲು; ರಾಯಭಾಗ; ಗಣಿ ಮಾಲೀಕರಿಗೆ ಕೊಡುವ ಅದುರಿನ ಭಾಗ ಯಾ ಅದರ ಬೆಲೆ.
  6. (ಯಾವುದೇ ಮೆಚ್ಚತಕ್ಕ ಗುಣಕ್ಕಾಗಿ ಕೊಟ್ಟ) ಕಾಣಿಕೆ: their success is a tribute to their perseverance ಅವರ ಜಯ ಅವರ ಸತತ ಪ್ರಯತ್ನಕ್ಕೆ ಸಿಕ್ಕ, ಸಂದ ಕಾಣಿಕೆ.
ಪದಗುಚ್ಛ
  1. a tribute to (ಒಬ್ಬನ ಶ್ಲಾಘನೀಯ ಗುಣಕ್ಕಾಗಿ) ಕೊಟ್ಟ ಕಾಣಿಕೆ.
  2. floral tributes (ಅಂತ್ಯಕ್ರಿಯೆ ಮೊದಲಾದ ಸಂದರ್ಭದಲ್ಲಿ ಅರ್ಪಿಸುವ) ಪುಷ್ಪಕಾಣಿಕೆ; ಹೂವಿನ ಸಮರ್ಪಣೆ.