tribunal ಟ್ರೈ(ಟ್ರಿ)ಬಊನ(ನ್‍)ಲ್‍
ನಾಮವಾಚಕ
  1. (ಬ್ರಿಟಿಷ್‍ ಪ್ರಯೋಗ) ನ್ಯಾಯಮಂಡಲಿ; (ಮುಖ್ಯವಾಗಿ) ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯವೊಂದನ್ನು ತೀರ್ಮಾನಿಸಲು ಸರ್ಕಾರದಿಂದ ನೇಮಕಗೊಂಡ ತಜ್ಞಮಂಡಲಿ.
  2. ನ್ಯಾಯಾಲಯ; ನ್ಯಾಯಸ್ಥಾನ.
  3. ನ್ಯಾಯಪೀಠ; ನ್ಯಾಯಾಧೀಶರು ಕುಳಿತುಕೊಳ್ಳಲು ಒದಗಿಸಿರುವ ಆಸನ.
  4. ನ್ಯಾಯಾಧೀಶ; ನ್ಯಾಯಾಧಿಕಾರಿ.
  5. ನ್ಯಾಯಾಧಿಕಾರ: before the tribunal of public opinion ಸಾರ್ವಜನಿಕಾಭಿಪ್ರಾಯ, ಪ್ರಜಾಭಿಪ್ರಾಯ ಎಂಬ ನ್ಯಾಯಾಲಯದ, ನ್ಯಾಯಾಧಿಕಾರದ ಎದುರು, ಸಮ್ಮುಖದಲ್ಲಿ.
  6. (ವಿಶೇಷ ಉದ್ದೇಶಗಳಿಗಾಗಿ ಸ್ಥಾಪಿತವಾದ) ಸ್ಥಳೀಯ ನ್ಯಾಯಮಂಡಲಿ.